Select Your Language

Notifications

webdunia
webdunia
webdunia
webdunia

ಸಾಲ, ಬಡ್ಡಿ ಕಟ್ಟುವಂತೆ ಬ್ಯಾಂಕಿನವರು ಪೀಡಿಸುವಂತಿಲ್ಲ

ಸಾಲ, ಬಡ್ಡಿ ಕಟ್ಟುವಂತೆ ಬ್ಯಾಂಕಿನವರು ಪೀಡಿಸುವಂತಿಲ್ಲ
ಧಾರವಾಡ , ಬುಧವಾರ, 27 ಮೇ 2020 (16:40 IST)
ಕೊರೊನಾ ವೈರಸ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲ ಅಥವಾ ಬಡ್ಡಿ ಕಟ್ಟುವಂತೆ ಪೀಡಿಸುವಂತಿಲ್ಲ.

ಸ್ವಸಹಾಯ ಸಂಘ, ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕ್ ನವರು ಸಾಲಗಾರರಿಗೆ ಸಾಲ ಅಥವಾ ಬಡ್ಡಿ ಕಟ್ಟುವಂತೆ ಪೀಡಿಸುವಂತಿಲ್ಲ. ಒಂದು ವೇಳೆ ಈ ರೀತಿ ಪೀಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಇನ್ನೂ ಎರಡ್ಮೂರು ತಿಂಗಳು ಸಾಲಗಾರರಿಂದ ಸಾಲ ಅಥವಾ ಬಡ್ಡಿ ಕಟ್ಟಿಸಿಕೊಳ್ಳುವಂತಿಲ್ಲ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ಬ್ಯಾಂಕರ್ಸ್ ಗಳ ಸಭೆ ಕರೆದು ಅವರಿಗೆ ಸೂಚನೆ ನೀಡಲು ನಿರ್ದೇಶನ ನೀಡಲಾಗುತ್ತದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಮಾರಿಗೆ ಒಂದೇ ದಿನ 28 ಕೇಸ್ : ಬೆಚ್ಚಿದ ಕಲಬುರಗಿ