Select Your Language

Notifications

webdunia
webdunia
webdunia
webdunia

ಮಹಿಳಾ ಮೀನುಗಾರರಿಗೆ ಬ್ಯಾಂಕ್ ಸಾಲ

ಮಹಿಳಾ ಮೀನುಗಾರರಿಗೆ ಬ್ಯಾಂಕ್ ಸಾಲ
ಕಾರವಾರ , ಬುಧವಾರ, 17 ಜೂನ್ 2020 (18:09 IST)
ಮಹಿಳಾ ಮೀನುಗಾರರಿಗೆ ಸಾಲ ನೀಡಲು ಬ್ಯಾಂಕ್‌ಗಳು ಆದ್ಯತೆ ನೀಡಬೇಕು.

ಹೀಗಂತ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಹಿಳೆಯರಿಗೆ ಬ್ಯಾಂಕ್ ಸಾಲ ನೀಡಿದಲ್ಲಿ ಸೂಕ್ತ ಕಾಲದಲ್ಲಿ ಮರು ಪಾವತಿಯಾಗುವುದರಿಂದ ಮಹಿಳಾ ಮೀನುಗಾರರಿಗೆ ಸಾಲ ನೀಡಲು ಆದ್ಯತೆ ನೀಡಬೇಕು. ಈ ಮಹಿಳೆಯರು 50 ಸಾವಿರದವರೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಬ್ಯಾಂಕುಗಳು ಮಾರ್ಜಿನ್ ವಿಧಿಸದೇ ಸಾಲ ನೀಡಬೇಕು ಎಂದಿದ್ದಾರೆ.

ಮೀನುಗಾರಿಕಾ ಬೋಟ್ ಖರೀದಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೀನುಗಾರರಿಗೆ 2 ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಣೆ ಪ್ರಗತಿದಾಯಕವಾಗಿರುವುದಿಲ್ಲ. ಮುಂದಿನ 2 ತಿಂಗಳೊಳಗಾಗಿ ಕಿಸಾನ್ ಕಾರ್ಡ್ ವಿತರಿಸುವ ಕಾರ್ಯವಾಗಬೇಕು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಪರಮೇಶ್ವರ ನಾಯ್ಕ್ ವಿರುದ್ಧ ಎಫ್ ಐ ಆರ್