ಬೆಂಗಳೂರು: ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳ ಲಾಕ್ ಡೌನ್ ಹೇರಿದ ಬೆನ್ನಲ್ಲೇ ಬೆಂಗಳೂರಿಗರು ಊರಿನತ್ತ ಮುಖ ಮಾಡಿದ್ದಾರೆ.
ಕಳೆದ ಬಾರಿ ಹಲವರು ಲಾಕ್ ಡೌನ್ ಸಂದರ್ಭದಲ್ಲಿ ಮಹಾನಗರಿಯಲ್ಲಿ ಸಿಲುಕಿಕೊಂಡಿದ್ದರು. ಅತ್ತ ಇಲ್ಲೂ ಇರಲಾರದೇ ಊರಿಗೂ ಹೋಗಲಾರದೇ ಪರದಾಡಿದ್ದರು.
ಆದರೆ ಈ ಬಾರಿ ಲಾಕ್ ಡೌನ್ ಗೆ ಒಂದು ದಿನಗಳ ಕಾಲಾವಕಾಶ ನೀಡಿದ್ದೇ ತಡ, ನೂರಾರು ಸಂಖ್ಯೆಯಲ್ಲಿ ಜನ ತಮ್ಮ ತವರೂರಿಗೆ ವಲಸೆ ಹೋಗಿದ್ದಾರೆ. ಆದರೆ ಇದರಿಂದಾಗಿ ಹಳ್ಳಿಗಳಿಗೂ ಕೊರೋನಾ ಹಬ್ಬುವ ಭೀತಿ ಎದುರಾಗಿದೆ. ಬಸ್, ರೈಲ್ವೇ ನಿಲ್ದಾಣಗಳಲ್ಲಿ ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಹೋಗುವವರ ಸಂಖ್ಯೆ ಸಾಕಷ್ಟಿತ್ತು. ಇದೀಗ ಈ ವಲಸಿಗರಿಂದ ಹಳ್ಳಿಗರಿಗೆ ಕೊರೋನಾ ಹರಡದಿದ್ದರೆ ಸಾಕು ಎಂದು ಗ್ರಾಮೀಣ ಭಾಗದ ಜನ ಪ್ರಾರ್ಥಿಸುವಂತಾಗಿದೆ.