ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸುವವರಿಗೇನೂ ಕಮ್ಮಿಯಿಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದ್ರೂ ಸಿಕ್ಕಿಬೀಳಬಾರದು ಎಂದು ಈ ಮಹಿಳೆ ಮಾಡಿದ ಉಪಾಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಗರದಲ್ಲಿ ಹೆಲ್ಮೆಟ್ ಹಾಕದೇ ವಾಹನದಲ್ಲಿ ಹೋಗುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಕೆಲವೊಮ್ಮೆ ಗ್ರಹಚಾರ ತಪ್ಪಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಮತ್ತೆ ಕೆಲವೊಮ್ಮೆ ಟ್ರಾಫಿಕ್ ಕ್ಯಾಮರಾ ಕಣ್ಣಿಗೆ ಬಿದ್ದು ದಂಡ ಕಟ್ಟಿಸಿಕೊಳ್ಳುತ್ತಾರೆ.
ಆದರೆ ಇಲ್ಲೊಬ್ಬ ಮಹಿಳೆ ಬೈಕ್ ಹಿಂಬದಿ ಕೂತು ಹೆಲ್ಮಟ್ ಹಾಕಿಲ್ಲ. ಕೊನೆಗೆ ಪೊಲೀಸರ ಕ್ಯಾಮರಾ ಕಣ್ಣಿಗೂ ಬೀಳಬಾರದು ಎಂದು ತನ್ನ ಕೈಯಲ್ಲಿದ್ದ ಬ್ಯಾಗ್ ನ್ನು ಬೈಕ್ ನಂಬರ್ ಪ್ಲೇಟ್ ಗೆ ಅಡ್ಡ ಹಿಡಿದು ಮರೆ ಮಾಚಿದ್ದಾಳೆ. ಇದರಿಂದ ಒಂದು ವೇಳೆ ಸಿಗ್ನಲ್ ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದರೂ ನಂಬರ್ ಪ್ಲೇಟ್ ನೋಡಿ ಬೈಕ್ ಮಾಲಿಕರು ಯಾರು ಎಂದು ಪತ್ತೆಯಾಗದಿರಲಿ ಎಂದು.
ಬೆಂಗಳೂರಿನ ಸಾರಕ್ಕಿ ಸಿಗ್ನಲ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ, ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಎಂಥಾ ಚಾಲಾಕಿ ಈಕೆ ಎಂದು ಕಾಮೆಂಟ್ ಮಾಡಿದ್ದಾರೆ.