Webdunia - Bharat's app for daily news and videos

Install App

ಬೆಂಗಳೂರು ವಿವಿ ಕಿತಾಟ

Webdunia
ಬುಧವಾರ, 23 ಫೆಬ್ರವರಿ 2022 (14:06 IST)
ಬೆಂಗಳೂರು ಯೂನಿವರ್ಸಿಟಿಗಳು ತ್ರಿಭಜನೆಯಾಗಿ ಮೂರು ವರ್ಷವಾಗಿದೆ. ಈಗಾಗ್ಲೇ ಮೂರು ವಿವಿಗಳು ಲೈಬ್ರರಿ, ಸ್ಟಾಫ್ ಸೇರಿದಂತೆ ಹಲವಾರು ವಿಚಾರದಲ್ಲಿ ಕಚ್ಚಾಡಿಕೊಂಡಿವೆ. ಈಗ ಮತ್ತೊಂದು ಜಗಳ ಶುರುವಾಗಿದ್ದು, ಎರಡು ವಿವಿಗಳ ನಡುವೆ ಕಟ್ಟಡಕ್ಕಾಗಿ ಕಿತ್ತಾಟ ಜೋರಾಗಿದೆ.
ಬೆಂಗಳೂರು ನಗರ ವಿವಿ ಹಾಗೂ ಉತ್ತರ ವಿವಿ ನಡುವೆ ಕಟ್ಟಡದ ವಿಚಾರವಾಗಿ ಗುದ್ದಾಟ ಶುರುವಾಗಿದೆ. ಬೆಂಗಳೂರು ಯೂನಿವರ್ಸಿಟಿ ಕುಲಪತಿ ಶ್ರೀಧರ್ ಸಿ ಎನ್ ವಿರುದ್ಧ, ಉತ್ತರ ಯೂನಿವರ್ಸಿಟಿ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.
 
ಶ್ರೀಧರ್ ಸಿ ಎನ್ ಅವರು ಉತ್ತರ ವಿವಿಯ ಪ್ರಮುಖ ಕಡತಗಳಿರುವ ಕಚೇರಿಯ ಕಿಟಕಿ ಒಡೆದು, ಫೈಲ್ ಗಳನ್ನ ಕಿತ್ತು ಹೊರಗೆಸೆದಿದ್ದಾರೆಂದು ಆರೋಪಿಸಲಾಗಿದೆ. ಶ್ರೀಧರ್ ಅವರು ವಿನಾಃ ಕಾರಣ ಯಾವುದೇ ಮಾಹಿತಿ ನೀಡದೆಯೇ ಕಡತಗಳನ್ನ ಹೊರಗೆಸೆದು ಮೊಂಡಾಟ ಮಾಡಿದ್ದಾರೆ. ಕಚೇರಿಯಲ್ಲಿ ಸುಪ್ರೀಂ ಕೋರ್ಟ್, ಹೈ ಕೋರ್ಟ್ ನ ಮುಖ್ಯವಾದ ಫೈಲ್ಗಳು ಈ ಕಟ್ಟಡದಲ್ಲಿವೆ. ಇದರ ಜೊತೆಗೆ ವಿದ್ಯಾರ್ಥಿಗಳ ಅಂಕಪಟ್ಟಿ, ಉತ್ತರ ಪತ್ರಿಕೆ, ಉಪನ್ಯಾಸಕರ ನೇಮಕಾತಿ ಫೈಲ್ಗಳು ಸಹ ಇವೆ. ಆದರೆ ಶ್ರೀಧರ್ ಅವರ ಮೊಂಡಾಟದಿಂದ ಈ ಎಲ್ಲಾ ಮುಖ್ಯ ಕಡತಗಳು ಬೀದಿ ಪಾಲಾಗಿವೆ ಎಂದು ಉತ್ತರ ವಿವಿ ಆಕ್ರೋಶ ವ್ಯಕ್ತಪಡಿಸಿದೆ.
 
ವಿವಿಗಳ ನಡುವೆ ಇಂತಹ ಸಮಸ್ಯೆಗಳು ಬಗೆಹರಿಯಲಿ ಎಂದು ರಾಜ್ಯ ಸರ್ಕಾರ 2018ರಲ್ಲಿ ಮೂರು ಪ್ರತ್ಯೇಕ ಯೂನಿವರ್ಸಿಟಿಗಳಾಗಿ ವಿಭಜನೆ ಮಾಡಿತ್ತು. ಅಂದಿನಿಂದ ಲೈಬ್ರರಿ, ಕಟ್ಟಡ ಸೇರಿದಂತೆ ಹಲವಾರು ವಿಚಾರದಲ್ಲಿ ಯೂನಿವರ್ಸಿಟಿಗಳ ನಡುವೆ ಮುಸುಕಿನ ಗುದ್ದಾಟ ಇದ್ದೇ ಇತ್ತು. ಈಗ ಏಕಾಏಕಿ ಇಂತಹ ಘಟನೆ ನಡೆದಿದೆ. ಕೋರ್ಟ್ ಆದೇಶದ ನಂತರ ಆ ಕಟ್ಟಡವನ್ನು ಲೀಗಲ್ ಸೆಲ್ ಆಗಿ ಉತ್ತರ ವಿವಿ ಬಳಸಿಕೊಳ್ಳುತ್ತಿದೆ. ಆದರೆ ಈ ಕಟ್ಟಡ ನಮಗೆ ಬೇಕೆಂದು ಹಠ ಹಿಡಿದಿರುವ ನಗರ ಯೂನಿವರ್ಸಿಟಿ ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದೆ. ಈ ಕಟ್ಟಡಲ್ಲಿ ಕೋರ್ಟ್ ಗೆ ಸಂಬಂಧಿಸಿದ ಪೈಲ್ಗಳು ಸಹ ಇದ್ದವು ಎಂದು ಹೇಳುತ್ತಿರುವ ಉತ್ತರ ವಿವಿ ಅಧಿಕಾರಿಗಳು, ಮುಖ್ಯ ಕಡತಗಳನ್ನ ಸಂಭಾಳಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ದೇಶಕ್ಕೆ ಬಾರೀ ಭದ್ರತೆ

ಮಹಾರಾಷ್ಟ್ರ ಭೀಕರ ಅಪಘಾತ: ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 7ಮಂದಿ

ಎಐ ತಂತ್ರವಲ್ಲ, ಮೆಟ್ರೋ ಹಳದಿ ಮಾರ್ಗದಲ್ಲೂ ಕೇಳಿಬರುತ್ತಿದೆ ಅಪರ್ಣಾ ಧ್ವನಿ, ಹೇಗೆ ಗೊತ್ತಾ

ಕಾಂಗ್ರೆಸ್‌ನಲ್ಲಿ ಸತ್ಯವಂತರಿಗೆ ಕಾಲವಲ್ಲ: ಶೋಭಾ ಕರಂದ್ಲಾಜೆ

ಕೆಎನ್‌ ರಾಜಣ್ಣ ರಾಜೀನಾಮೆ: ಸಂಚಲನ ಸೃಷ್ಟಿಸುತ್ತಿದೆ ಡಿಕೆಶಿ ಆಪ್ತನ ಹೇಳಿಕೆ

ಮುಂದಿನ ಸುದ್ದಿ
Show comments