ಬೆಂಗಳೂರು: ರಾಜ್ಯ ರಾಜಧಾನಿಯ ಮದರಸಾವೊಂದರಲ್ಲಿ ಹೆಣ್ಣು ಮಕ್ಕಳಿಗೆ ಕಾಟ ಕೊಡುತ್ತಿದ್ದ ಶಿಕ್ಷಕ ಕೊನೆಗೂ ಅರೆಸ್ಟ್ ಆಗಿದ್ದಾನೆ. ಆತನ ಕ್ರೌರ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಬೆಂಗಳೂರಿನ ಮದರಸಾ ಶಿಕ್ಷಕ ಮೊಹಮ್ಮದ್ ಅಲಿ ಹಸನ್ ಎಂಬಾತ ತನ್ನ ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿರುವ ಪುಟ್ಟ ಹೆಣ್ಣು ಮಕ್ಕಳನ್ನು ಮನಬಂದಂತೆ ಥಳಿಸಿ ಹಿಂಸೆ ನೀಡುತ್ತಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿತ್ತು.
ಬಾಲಕಿಯೊಬ್ಬಳನ್ನು ಕೈ ಹಿಡಿದೆಳೆದು ಮನಬಂದಂತೆ ಸಿಕ್ಕ ಸಿಕ್ಕಲ್ಲಿ ಹೊಡೆದು ಹಿಂಸೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿ ಪೋಷಕರು ಶಿಕ್ಷಕನ ಮೇಲೆ ಆಕ್ರೋಶಗೊಂಡಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಶಿಕ್ಷಕ ಮೊಹಮ್ಮದ್ ಹಸನ್ ನನ್ನು ಪೊಲೀಸರು ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಈತ ಲೈಂಗಿಕ ದೌರ್ಜನ್ಯವನ್ನೂ ಎಸಗುತ್ತಿದ್ದ ಎನ್ನಲಾಗಿದೆ. ಇದೀಗ ಕೊನೆಗೂ ಆತನನ್ನು ಬಂಧಿಸಲಾಗಿದೆ.