ಬೆಂಗಳೂರಿನಲ್ಲಿ ಕಿಡ್ನಾಪ್ ಹೈ ಡ್ರಾಮಾ

Webdunia
ಶನಿವಾರ, 12 ಫೆಬ್ರವರಿ 2022 (15:43 IST)
ಅಪಹರಣ ಪ್ರಕರಣಕ್ಕೆ ಇದೀಗೆ ಟ್ವಿಸ್ಟ್ ಸಿಕ್ಕಿದೆ. ಎಪ್‌ಐಆರ್ ದಾಖಲಾದ ನಂತರ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ಆನೇಕಲ್ ಪೊಲೀಸರು ರವಿ ಮತ್ತು ಬಾಬು ಇಬ್ಬರನ್ನು ಬಂಧಿಸಿದ್ದಾರೆ. ಅಪಹರಣದ ರೀತಿಯಲ್ಲಿ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು.
ದೇವನಹಳ್ಳಿ: ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಇಬ್ಬರನ್ನು ಕಿಡ್ನಾಪ್ ಮಾಡಿದ್ದಾರೆ.
ಪೊಲೀಸರ ಸೋಗಿನಲ್ಲಿ ಬಂದು ಕಂಬಿ ಅಂಗಡಿ ಮಾಲೀಕ ರಾಜು ನಾಯಕ್ ಮತ್ತು ಬಾಬು ಎಂಬುವವರನ್ನು ಅಪಹರಣ ಮಾಡಿದ್ದಾರೆ. ಆರೋಪಿಗಳು ವೈಟ್​ಫೀಲ್ಡ್​ ಪೊಲೀಸರೆಂದು ಹೇಳಿಕೊಂಡು ವಿಚಾರಣೆಗೆ ಬರುವಂತೆ ಹೇಳಿ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿ 8.5 ಟನ್ ಕಬ್ಬಿಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಳಾಗಿದೆ.
 
ಅಪರಿಚಿತರು ನಿನ್ನೆ ಮಧ್ಯಾಹ್ನ ರಾಜು ನಾಯಕ್ ಮತ್ತು ಸಂಜೆ ಬಾಬು ಎಂಬುವರನ್ನ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ. ಮೊದಲಿಗೆ ವೈಟ್​ಫೀಲ್ಡ್ ಪೊಲೀಸರು ಅಂತ ಹೇಳಿದ್ದಾರೆ. ನಂತರ ವೈಟ್​ಫೀಲ್ಟ್ ಪೊಲೀಸ್ ಠಾಣೆ ಬಳಿ ಕುಟುಂಬಸ್ಥರು ಹೋಗಿ ವಿಚಾರಿಸಿದಾಗ ನಾವಲ್ಲ ಅಂತ ಹೇಳಿದ್ದರು. ಕಿಡ್ನಾಪ್ ಮಾಡಿಕೊಂಡು ಕಾರಿನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಳಿ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.
 
ಕಿಡ್ನಾಪ್ ಕೇಸ್​ಗೆ ಟ್ವಿಸ್ಟ್
ಅಪಹರಣ ಪ್ರಕರಣಕ್ಕೆ ಇದೀಗೆ ಟ್ವಿಸ್ಟ್ ಸಿಕ್ಕಿದೆ. ಎಪ್‌ಐಆರ್ ದಾಖಲಾದ ನಂತರ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ಆನೇಕಲ್ ಪೊಲೀಸರು ರವಿ ಮತ್ತು ಬಾಬು ಇಬ್ಬರನ್ನು ಬಂಧಿಸಿದ್ದಾರೆ. ಅಪಹರಣದ ರೀತಿಯಲ್ಲಿ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಸ್ಥಳೀಯ ಆವಲಹಳ್ಳಿ ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡದೆ ಪೊಲೀಸರು ಕರೆದು ಹೋಗಿದ್ದರು. ಆವಲಹಳ್ಳಿ ಪೊಲೀಸರು ಅಪಹರಣ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮಾಹಿತಿ ತಿಳಿದುಬಂದಿದೆ.
 
ಆನೇಕಲ್ ಪೊಲೀಸರ ವಿರುದ್ಧ ಕುಟುಂಬಸ್ಥರು, ಆವಲಹಳ್ಳಿ ಪೊಲೀಸರು ಗರಂ ಆಗಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಹೈಡ್ರಾಮ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ, ದೆಹಲಿಗೆ ಆಗಮಿಸಿದ ರಷ್ಯಾದ ವಿಶೇಷ ಭದ್ರತಾ ಪಡೆ

ಮುಂದಿನ ಸುದ್ದಿ
Show comments