Webdunia - Bharat's app for daily news and videos

Install App

ನಾಪತ್ತೆಯಾಗಿದ ಮಕ್ಕಳು ಪತ್ತೆ..!!!

Webdunia
ಸೋಮವಾರ, 11 ಅಕ್ಟೋಬರ್ 2021 (17:49 IST)
ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಪತ್ತೆಯಾಯಿತು.
ಸೌಂದರ್ಯ ಲೇಬರ್ಟನ ನಿವಾಸಿಗಳ ನಂದನ್, ಪರಿಕ್ಷಿತ್ ಮತ್ತು ಕಿರಣ್ ಅವರನ್ನು ರಕ್ಷಿಸಿ ಪೆ Ç ೀಷಕರ ಆತಂಕವನ್ನು ದೂರ ಮಾಡುತ್ತಿದೆ.
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಈ ಮೂವರು ಮಕ್ಕಳು ಶನಿವಾರ ಬೆಳಿಗ್ಗೆ ಜಾಗಿಂಗ್‌ಗೆ ಹೋಗಲು ಹೇಳಿ ಹೊರಹೋಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಮೂವರು ಪತ್ರಗಳನ್ನು ಬರೆದಿಟ್ಟಿದ್ದು, ತಮಗೆ ಓದುವುದಕ್ಕಿಂತ ಕ್ರೀಡೆಯಲ್ಲಿ ಆಸಕ್ತಿ ಇದೆ. ನೀವು ಅಧ್ಯಯನವಂತೆ ಒತ್ತಾಯ ಮಾಡುತ್ತೀರ. ಆದರೆ, ನಮಗೆ ಆಸಕ್ತಿ ಇಲ್ಲ. ಕ್ರೀಡೆಯಲ್ಲಿ ಹೊಸ ಜೀವನ ರೂಪಿಸಿಕೊಂಡು ಅದರಲ್ಲಿ ಒಳ್ಳೆಯ ಹೆಸರು ಮತ್ತು ಹಣ ಗಳಿಕೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಮಗೆ ಕಬಡ್ಡಿ ಕ್ರೀಡೆ ತುಂಬಾ ಇಷ್ಟ. ಈ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ವಾಪಸ್ ಬರುತ್ತೇನೆ ಎಂದು ಮನೆಯಲ್ಲಿ ಪತ್ರ ಬರೆದಿಟ್ಟು ಈ ಮೂವರು ಹೊರಗೆ ಹೋಗಿದ್ದಾರೆ. ನಂತರ ಕೆಂಗೇರಿಗೆ ಹೋಗಿ ಅಲ್ಲಿಂದ ಬಸ್‍ನಲ್ಲಿ ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟ, ಅರಮನೆ ನೋಡಿಕೊಂಡು ಅರಸು ರಸ್ತೆಯಲ್ಲಿ ತಿರುಗಾಡಿದ್ದಾರೆ.ನಂತರ ಇಲ್ಲಿನ ಡೆಕೆತ್‍ಲಾನ್ ಎಂಬ ಕ್ರೀಡಾ ಸಾಮಗ್ರಿಗಳ ಅಂಗಡಿಗೆ ಹೋಗಿ ಕೆಲಸ ಕೇಳಿದ್ದಾರೆ. ಅಲ್ಲಿ ಕೆಲಸ ಸಿಗದಿದ್ದಾಗ ಮೂವರು ಬಾಲಕರು ಮಂಗಳೂರಿನಲ್ಲಿ ಕ್ರೀಡೆಗೆ ಪ್ರಾಮುಖ್ಯತೆ ಇದೆ. ಅಲ್ಲಿಗೆ ಹೋಗೋಣ ಎಂದು ಯೋಚಿಸಿದ್ದಾರೆ. ಅಷ್ಟರೊಳಗೆ ಅವರ ಕೈಲಿದ್ದ ಹಣವೆಲ್ಲ ಖರ್ಚಾಗಿದ್ದರಿಂದ ರಾತ್ರಿ ವಾಪಸ್ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
ಇಂದು ಮುಂಜಾನೆ ಆನಂದರಾವ್ ಸರ್ಕಲ್ ಬಳಿ ಈ ಮೂವರು ಮಕ್ಕಳು ಹೋಗುತ್ತಿದ್ದಾಗ ಚಿಂದಿ ಆಯುವ ವ್ಯಕ್ತಿ ಗಮನಿಸಿ ಈ ಮಕ್ಕಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಆ ವ್ಯಕ್ತಿಯ ಹೇಳಿಕೆ ಆಧರಿಸಿ ಉಪ್ಪಾರಪೇಟೆ ನಿಲ್ದಾಣದಲ್ಲಿ ಇಂದು ಮುಂಜಾನೆ ಆನಂದರಾವ್ ಸರ್ಕಲ್ ಬಳಿ ಮೂವರು ಮಕ್ಕಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದು ಪೋಷಕರಿಗೆ ವಿಷಯದ ಅಗತ್ಯವಿದೆ. ಮುಂದೆ ಈ ಮೂವರು ಮಕ್ಕಳು ತಮ್ಮ ತಮ್ಮ ಪೋಷಕರ ಮಡಿಲು ಸೇರಿದ್ದು, ಆ ಕುಟುಂಬಗಳ ಸದಸ್ಯರು, ಸಂಬಂಕರು, ಸ್ನೇಹಿತರು ಸಂತಸಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಬುರುಡೆ ರಹಸ್ಯ: ಎಸ್‌ಐಟಿ ತನಿಖೆ ಬಗ್ಗೆ ಪರಮೇಶ್ವರ್ ಬಿಗ್ ಅಪ್ಡೇಟ್

ಮಂಗಳೂರು ದಸರಾ ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್‌ ಟೂರ್‌ಗೆ ಭರ್ಜರಿ ರೆಸ್ಪಾನ್ಸ್‌, ಪ್ರವಾಸಿಗರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಸಚಿವ ಸಂಪುಟ ವಿಸ್ತರಣೆ: ಶಾಕಿಂಗ್ ಹೇಳಿಕೆ ಕೊಟ್ಟ ಗೃಹ ಸಚಿವ ಪರಮೇಶ್ವರ್

Karur Stampede: ಟಿವಿಕೆಯ ಇಬ್ಬರು ಕಾರ್ಯದರ್ಶಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಜನಸಾಗರ ನಿಯಂತ್ರಣ ಪೊಲೀಸರ ಜವಾಬ್ದಾರಿ, ಸ್ಟ್ಯಾಲಿನ್ ಸರ್ಕಾರಕ್ಕೆ ಟಿಎಂಕೆ ವಕೀಲ ಕೌಂಟರ್‌

ಮುಂದಿನ ಸುದ್ದಿ
Show comments