Select Your Language

Notifications

webdunia
webdunia
webdunia
webdunia

ತ್ರಿಭಜನೆಯಾದ ಬಳಿಕ ಚೊಚ್ಚಲ ಘಟಿಕೋತ್ಸವಕ್ಕೆ ಸಾಕ್ಷಿಯಾದ ಬೆಂ.ನಗರ ವಿವಿ

ತ್ರಿಭಜನೆಯಾದ ಬಳಿಕ ಚೊಚ್ಚಲ ಘಟಿಕೋತ್ಸವಕ್ಕೆ ಸಾಕ್ಷಿಯಾದ ಬೆಂ.ನಗರ ವಿವಿ
bangalore , ಸೋಮವಾರ, 11 ಏಪ್ರಿಲ್ 2022 (21:09 IST)
ಸುಮಾರು 165 ವರ್ಷ ಇತಿಹಾಸ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಚೊಚ್ಚಲ ಘಟಿಕೋತ್ಸವ ಕಾರ್ಯಕ್ರಮ ನಡೆಯಿತ್ತು. ವಿವಿ ವಿಭಜನೆಯಾದ ಬಳಿಕ ನಡೆಯುತ್ತಿರುವ ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹಲವು ಕೇತ್ರದಲ್ಲಿ ಹೆಸರು ಮಾಡಿದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು. ಇನ್ನು ಇಂದು ನಡದ ಅದ್ಧೂರಿ ಕಾರ್ಯಕ್ರಮ ಯುವಪೀಳಿಗೆಗೆ ಪ್ರೇರಣೆಯಾಗಿತ್ತು.ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಱನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸಾವ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಕೋವಿಡ್ ಆದ ಬಳಿಕ ನಡೆಯುತ್ತಿರುವ ಈ ಘಟಿಕೋತ್ಸಾವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ರಾಜ್ಯಪಾಲ ಥಾವರ್ ಚಂದ್ ಗೆಹೋಟ್, ಪದ್ಮವಿಭೂಷಣ ಡಾ. ಕೆ . ಕಸ್ತೂರಿರಂಗನ್ ಸೇರಿದಂತೆ ಹಲವಾರು ಗಣ್ಯುರು ಭಾಗಿಯಾಗಿದ್ರು. ಇನ್ನು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ  ಮೂವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು. ಸಮಾಜಸೇವಾ ಕ್ಷೇತ್ರದಲ್ಲಿ ಎಂ .ಆರ್ ಜೈಶಂಕರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣರಿಗೆ ಇನ್ನು ವಿಶೇಷ ವಾಗಿ ಚಿತ್ರೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ರವಿಚಂದ್ರನ್ ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇನ್ನು ಘಟಿಕೋತ್ಸಾವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ  ಒಟ್ಟು 41, 768 ವಿದ್ಯಾರ್ಥಿಗಳಿಗೆ ಪದವಿ ಪ್ರಶಸ್ತಿ ನೀಡಲಾಯ್ತು.ಇನ್ನು ಇಂದು ನಡೆದ ಘಟಿಕೋತ್ಸಾವ ಕಾರ್ಯಕ್ರಮದ ನಡುವೆ ಅಶ್ವಥ್ ನಾರಾಯಣ್ ಮತ್ತೆ ಎಡವಟ್ಟು ಮಾಡಿ ಸುದ್ದಿಯಾಗಿದ್ದಾರೆ. ಘಟಿಕೋತ್ಸಾವ ನಿಯಮನವನ್ನ ಅಶ್ವಥ್ ನಾರಾಯಣ್ ಗಾಳಿಗೆ ತೂರಿ ಬೇಜಾವಬ್ದಾರಿಯುತವಾಗಿ ವರ್ತನೆ ಮಾಡಿದ್ದಾರೆ.ನಿಯಮಾವಳಿ ಪ್ರಕಾರ ಮುಖ್ಯ ಅತಿಥಿ ಭಾಷಣದ ನಂತರ ಮಾತನಾಡಲು ಅವಕಾಶವಿಲ್ಲಆದರೆ ಈ ನಿಯಮ ಸಚಿವ ಅಶ್ವಥ್ ನಾರಾಯಣ್ ಉಲ್ಲಂಘಿಸಿದಾರೆ. ಮುಖ್ಯ ಅತಿಥಿ ಭಾಷಣದ ನಂತರ ಘಟಿಕೋತ್ಸವ ಮುಕ್ತಾಯಗೊಳಿಸಬೇಕು. ಆದ್ರೆ ಹಾಗೆ ಮಾಡದೇ ಈ ಹಿಂದೆಯೂ ಮೈಸೂರು ವಿವಿಯಲ್ಲಿ ಹೀಗೆ ನಡೆದ ಘಟಿಕೋತ್ಸವದಲ್ಲೂ  ಸಚಿವ ಅಶ್ವಥ್ ನಾರಾಯಣ್ ಭಾಷಣ ಮಾಡಿ ನಿಯಮ ಉಲ್ಲಂಘಿದ್ರು. ಹೀಗೆ ಈಗ ಮತ್ತೆ ಮಾಡಿದ್ದಾರೆ. ಇದರ ನಡುವೆ ಅವಾರ್ಡ್ ತೆಗೆದುಕೊಂಡಂತಹ ನಟ ಡಾ.ರವಿಚಂದ್ರನ್ ಅವಾರ್ಡ್ ಯಿಂದ ಸಂತಸಪಟ್ರು ಅವಾರ್ಡ್ ಯಿಂದ  ಒಂದು ಸ್ಟ್ರೆಂತ್ ಬಂದಿದೆ.ಮುಂದಿನ ದಿನ ಇನ್ನೂ ಅನೇಕ ಹೆಚ್ಚು ಸಾಧನೆ ಮಾಡುತ್ತೇನೆ.ಇಂದು ಕೊಟ್ಟ ಅವಾರ್ಡ್ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಅಂತಾ ಮನದಾಳದ ಮಾತು ಹಂಚಿಕೊಂಡ್ರು.
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ವಿವರ ನೋಡುವುದಾದ್ರೆ
 
ಪೂರ್ವ ಎನ್ ಗಾಂಧಿ- ಬಿ.ಕಾಂ- 3 ಚಿನ್ನದ ಪದಕ
 
ತಾಕಿಯ ಖಾನಮ್- ಬಿಬಿಎ- 2 ಚಿನ್ನದ ಪದಕ
 
ದುವ್ವುರು ಅಲೇಕ್ಯಾ- ಎಂ.ಬಿಎ- 2 ಚಿನ್ನದ ಪದಕ
 
ಆನ್ ಮೇರಿ ಸೆಬಾಸ್ಟಿಯನ್- ಎಂಎಸ್ಸಿ- 2 ಚಿನ್ನದ ಪದಕ
 
ನಿವೇದಿತಾ.ಬಿ.ಎಸ್-ಎಂ.ಎಸ್ಸಿ- 2 ಚಿನ್ನದ ಪದಕ
 
ಅನಿತಾ ಕರೆನ್ ಪೆರೈಗಾ- ಎಂ.ಎ. ಫ್ರೆಂಚ್- 2 ಚಿನ್ನದ ಪದಕ
ಪ್ರಥಮ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 11,768 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿತ್ತು.ಇದರಲ್ಲಿ 14,823 (35,49) ಪುರುಷ ವಿದ್ಯಾರ್ಥಿಗಳು ಮತ್ತು 26,945 (64.51%) ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಸ್ನಾತಕೋತ್ತರ 29,240 ವಿದ್ಯಾರ್ಥಿಗಳಿಗೆ  ಪದವಿ ನೀಡಿ ಗೌರವಿಸಲಾಗಿತ್ತು. ಇನ್ನು ಕಲಾ ನಿಕಾಯದ 2,723 ವಿದ್ಯಾರ್ಥಿಗಳಿಗೆ,  ವಿಜ್ಞಾನ ನಿಕಾಯದ 7,179 ವಿದ್ಯಾರ್ಥಿಗಳಿಗೆ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 16,881 ವಿದ್ಯಾರ್ಥಿಗಳಿಗೆ,ಶಿಕ್ಷಣ ನಿಕಾಯದ 2,457 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯ್ತು. ಸ್ನಾತಕೋತ್ತರ (Post Graduate)  ಒಟ್ಟು 12,528 ವಿದ್ಯಾರ್ಥಿಗಳಿಗೆ ಪದವಿ ಕೊಟ್ಟು ಗೌರವಿಸಲಾಗಿತ್ತು. ಘಟಿಕೋತ್ಸವದಲ್ಲಿ ಒಟ್ಟು 84 ಪ್ರಥಮ ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಬ್ಯಾಂಕ್ ಸರ್ಟಿಫಿಕೇಟ್‌ ಪಡೆದಿದ್ದಾರೆ. ಇಂದು ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಎಡವಟ್ಟಿನ ನಡುವೆ ಪ್ರಥಮ ಘಟಿಕೋತ್ಸಾವ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಹೀಗೆ ವಿದ್ಯಾರ್ಥಿಗಳು ಇನ್ನು ಹೆಚ್ಚೆಚ್ಚು ಪದಕ ಪಡೆಯಲಿ ಎಂಬುದೇ ನಮ್ಮ ಆಶಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್‌ ಸ್ಟಾರ್‌’ ಯಶ್ ನಟನೆಯ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಲು ವೇದಿಕೆ ಸಜ್ಜು