Publish Date: Wed, 13 Apr 2022 (20:19 IST)
Updated Date: Wed, 13 Apr 2022 (20:34 IST)
ಕೆಜಿಎಫ್ - 2 ಸಿನಿಮಾ ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದೆ. ಹಾಡುಗಳ ಮೂಲಕ KGF-2 ಸಿನಿಮಾ ಗಮನ ಸೆಳೆಯುತ್ತಿದೆ. ಈಗಾಗಲೇ ತೂಫಾನ್ ಎಂಬ ಪವರ್ಫುಲ್ ಹಾಡು ಮತ್ತು ಅಮ್ಮನ ಕುರಿತಾದ ಭಾವುಕ ಹಾಡೊಂದು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು.. ಈಗ ಈ ಸಿನಿಮಾದ ಮೂರನೇ ಹಾಡು ಬಿಡುಗಡೆ ಆಗಿದೆ. ರವಿ ಬಸ್ರೂರು ಸಂಗೀತ ನೀಡಿರುವ ಸುಲ್ತಾನ್.. ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಯಶ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.