Select Your Language

Notifications

webdunia
webdunia
webdunia
webdunia

'ಬನಾಯೇಂಗೆ ಮಂದಿರ್' ಹಾಡು ನಿಷೇಧ

'ಬನಾಯೇಂಗೆ ಮಂದಿರ್' ಹಾಡು ನಿಷೇಧ
Koppal , ಶನಿವಾರ, 10 ಡಿಸೆಂಬರ್ 2016 (10:24 IST)
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಡಿ.11 ಮತ್ತು 12 ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಯ ಸಲುವಾಗಿ ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ಅಥವಾ ವಿಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ. 
 
ಭಜರಂಗದಳದ ತಾಲೂಕು ಸಂಯೋಜಕರು ಹನುಮಮಾಲಾ ಕಾರ್ಯಕ್ರಮ ಹಮ್ಮಿಕೊಂಡಿದ್ದು,  16 ಜಿಲ್ಲೆಗಳ ಸುಮಾರು 4 ರಿಂದ 5 ಸಾವಿರ ಜನ ಭಕ್ತಾಧಿಗಳು ಸೇರಿ ಗಂಗಾವತಿ ನಗರದಲ್ಲಿ ಬಹಿರಂಗ ಸಭೆ ಮಾಡಿ ಕಾಲ್ನಡಿಗೆಯ ಮುಖಾಂತರ ಅಂಜನಾದ್ರಿ (ಕಿಷ್ಕಿಂದಾ) ಬೆಟ್ಟಕ್ಕೆ ತೆರಳಲಿದ್ದಾರೆ. 
 
ಹನುಮಮಾಲಾ ಕಾರ್ಯಕ್ರಮ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಗಂಗಾವತಿ ನಗರದಲ್ಲಿ ಡಿ.11 ರಂದು ಬೆಳಿಗ್ಗೆ 6 ಗಂಟೆಯಿಂದ ಡಿ.13 ರ ರಾತ್ರಿ 12 ಗಂಟೆಯವರೆಗೆ ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ, ವೀಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಗಂಭೀರ ಚಿಂತನೆ