ಎಣ್ಣೆ ಪ್ರಿಯರಿಗೆ ಬ್ಯಾಡ್ ನ್ಯೂಸ್. ಕೊರೊನಾ ವೈರಸ್ ಎಫೆಕ್ಟ್ ಇದೀಗ ಮತ್ತೊಮ್ಮೆ ಕುಡುಕರ ಮೇಲಾಗಲಿದೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜುಲೈ 14 ರಿಂದ ಜುಲೈ 20 ರವರೆಗೆ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ನಡುವೆ ಕಲಬುರಗಿ ನಗರ ಹಾಗೂ ತಾಲೂಕುಗಳ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬಾರ್ ಗಳು, ಮದ್ಯಮಾರಾಟ ಬಂದ್ ಇರಲಿವೆ.
ಎಣ್ಣೆ ಬೇಕು ಎಂದರೆ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಬಿಟ್ಟು ಹೊರಹೋಗಬೇಕು. ಕೇವಲ ಎಂ.ಎಸ್.ಐ.ಎಲ್ ಹಾಗೂ ಸಿ.ಎಲ್ 2 ಶಾಪ್ ಗಳಲ್ಲಿ ಎಣ್ಣೆ ಸಿಗಲಿದೆ.