Select Your Language

Notifications

webdunia
webdunia
webdunia
webdunia

ಪೋಸ್ಟ್ ಆಫೀಸ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್ ; IPPB ಖಾತೆಗಳ ಮೇಲಿನ ಬಡ್ಡಿದರ ಕಡಿತ..!

ಪೋಸ್ಟ್ ಆಫೀಸ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್ ; IPPB ಖಾತೆಗಳ ಮೇಲಿನ ಬಡ್ಡಿದರ ಕಡಿತ..!
bangalore , ಸೋಮವಾರ, 31 ಜನವರಿ 2022 (20:53 IST)
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ತನ್ನ ಗ್ರಾಹಕರಿಗೆ ಆಘಾತಕಾರಿ ಸುದ್ದಿಯನ್ನು ನೀಡಿದ್ದು, ತನ್ನ ಉಳಿತಾಯ ಖಾತೆಗಳ ( Saving account) ಮೇಲಿನ ಬಡ್ಡಿದರವನ್ನು ಇಳಿಸುತ್ತಿರುವುದಾಗಿ ಪ್ರಕಟಿಸಿದ್ದು, ಈ ಕಡಿಮೆಯಾದ ಬಡ್ಡಿದರಗಳು ನಾಳೆಯಿಂದ, ಅಂದರೆ ಫೆಬ್ರವರಿ 1, 2022 ರಿಂದ ಜಾರಿಗೆ ಬರುತ್ತಿವೆ.
ಭಾರತ ಅಂಚೆ ಪಾವತಿ ಬ್ಯಾಂಕ್ (IPPB) ಅನ್ನು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ ನಿರ್ವಹಿಸುತ್ತದೆ. IPPB ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಫೆಬ್ರವರಿ 1 ರಿಂದ 1 ಲಕ್ಷದವರೆಗಿನ ದರಗಳು ಕೇವಲ ಶೇಕಡಾ 2.25 ಬಡ್ಡಿ ಮಾತ್ರ ಸಿಗುತ್ತದೆ. ಇನ್ನು, 1 ಲಕ್ಷದಿಂದ 2 ಲಕ್ಷದವರೆಗಿನ ಮೊತ್ತದ ಬಡ್ಡಿ ದರವನ್ನು ಶೇಕಡಾ 2.50 ಕ್ಕೆ IPPB ನಿಗದಿಪಡಿಸಿದೆ.
ಈ ಹಿಂದೆ ಅಂಚೆ ಇಲಾಖೆಯು 1 ಲಕ್ಷದವರೆಗಿನ ಬ್ಯಾಲೆನ್ಸ್‌ಗೆ ಶೇ.2.50 ಮತ್ತು ರೂ.1 ಲಕ್ಷದಿಂದ ರೂ.2 ಲಕ್ಷದವರೆಗಿನ ಬ್ಯಾಲೆನ್ಸ್‌ಗಳಿಗೆ ಶೇ.2.75 ಬಡ್ಡಿದರ ನೀಡಿತ್ತು. ಈ ಬಡ್ಡಿದರಗಳು ಜುಲೈ 1, 2021 ರಿಂದಲೇ ಜಾರಿಯಲ್ಲಿತ್ತು. ಅಂದರೆ ಪೋಸ್ಟ್ ಇಂಡಿಯಾ ಪೇಮೆಂಟ್ಸ್ ಬ್ಯಾಂಕ್ ಈಗ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿತಗೊಳಿಸಿದೆ. IPPB ಈ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಗ್ರಾಹಕರಿಗೆ ಪಾವತಿಸುತ್ತದೆ.
IPPB ಅಧಿಸೂಚನೆಯ ಪ್ರಕಾರ … ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆಸ್ತಿ ಹೊಣೆಗಾರಿಕೆ (assets and liability) ಸಮಿತಿಯು ಅನುಮೋದಿಸಿದ ನೀತಿಯ ಪ್ರಕಾರ ಉಳಿತಾಯ ಖಾತೆಗಳ ಮೇಲಿನ ಎಲ್ಲಾ ಗ್ರಾಹಕರ ರೂಪಾಂತರಗಳ ಬಡ್ಡಿದರಗಳನ್ನು ಪರಿಶೀಲಿಸಿದ್ದು, ಈ ಬಡ್ಡಿ ದರಗಳು ಫೆಬ್ರವರಿ 1, 2022 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ 2022-23ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಆರಂಭ