Select Your Language

Notifications

webdunia
webdunia
webdunia
webdunia

ಹಾಸನದಲ್ಲಿ ಸೋಂಕು ಕಡಿಮೆಯಾಗದ ಹಿನ್ನಲೆ; ವಾರದಲ್ಲಿ 4ದಿನ ಕಂಪ್ಲೀಟ್ ಲಾಕ್ ಡೌನ್

ಹಾಸನದಲ್ಲಿ ಸೋಂಕು ಕಡಿಮೆಯಾಗದ ಹಿನ್ನಲೆ; ವಾರದಲ್ಲಿ 4ದಿನ ಕಂಪ್ಲೀಟ್ ಲಾಕ್ ಡೌನ್
ಹಾಸನ , ಭಾನುವಾರ, 23 ಮೇ 2021 (11:20 IST)
ಹಾಸನ : ಹಾಸನ ಜಿಲ್ಲೆಯಲ್ಲಿ  ವಾರದಲ್ಲಿ  4ದಿನ ಕಂಪ್ಲೀಟ್ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ. ಜೂನ್ 7ರವರೆಗೂ ವಾರದಲ್ಲಿ 4ದಿನ ಕಂಪ್ಲೀಟ್ ಲಾಕ್ ಡೌನ್ ಮಾಡಲಾಗುವುದು ಎನ್ನಲಾಗಿದೆ.

ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಲಾಕ್ ಡೌನ್ ಮಾಡಲಾಗುವುದು. ಹಾಗೇ  ವಾರದಲ್ಲಿ 3 ದಿನಗಳ ಕಾಲ ಮಾತ್ರ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು.ಸೋಮವಾರ , ಬುಧವಾರ, ಶುಕ್ರವಾರ ಅಗತ್ಯವಸ್ತುಗಳ ಖರೀದಿ ಮಾಡಲು ಅವಕಾಶ ನೀಡಲಾಗುವುದು.

ಹಾಸನ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗದ ಹಿನ್ನಲೆಯಲ್ಲಿ ಕ್ರಮ ಈ ಬಗ್ಗೆ ಜಿಲ್ಲಾಧಿಕಾರಿ ಗಿರೀಶ್ ಆದೇಶ ಹೊರಡಿಸಿದ್ದಾರೆ. ಜೂನ್ 7ರ ಬೆಳಿಗ್ಗೆ  6ರವರೆಗೂ ಆದೇಶ ಜಾರಿಯಲ್ಲಿರುತ್ತದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ , ದ್ವಿತೀಯ ಪಿಯು ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು?