Daily Horoscope

Select Your Language

Notifications

webdunia
webdunia
webdunia
webdunia

ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್ ಪಕ್ಷ: ಬಿ.ಶ್ರೀರಾಮುಲು

B Sriramulu
ಚಿತ್ರದುರ್ಗ: ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಟೀಕಿಸಿದ್ದಾರೆ.
 
ಚಿತ್ರದುರ್ಗದಲ್ಲಿ ಇಂದು ಏರ್ಪಡಿಸಿದ್ದ ದೇಶವನ್ನು ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಷಡ್ಯಂತ್ರದ ವಿರುದ್ಧ ಜಾಗೃತಿ ಅಭಿಯಾನ “ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ” ಪಾದಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಉಳಿಸಿ ಹಾಗೂ ಸಂವಿಧಾನ ಉಳಿಸಿ ಹೋರಾಟವನ್ನು ಬಿಜೆಪಿ ಮಾಡುತ್ತಿದೆ ಎಂದು ವಿವರಿಸಿದರು.
 
 ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ದೇಶಕ್ಕೆ ಯುದ್ಧದಂಥ ಸಮಸ್ಯೆ ಇರಲಿಲ್ಲ. ತಮ್ಮ ಪ್ರಧಾನಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಅವರು ಈ ಕ್ರಮ ಕೈಗೊಂಡಿದ್ದರು. ಭಾರತವನ್ನು 21 ತಿಂಗಳ ಕಾಲ ಕತ್ತಲಲ್ಲಿ ಇಟ್ಟಿದ್ದರು ಎಂದು ಆಕ್ಷೇಪಿಸಿದರು. 
 
ಜಯಪ್ರಕಾಶ್ ನಾರಾಯಣ್ ಸೇರಿ ಹಲವಾರು ನಾಯಕರು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗುವಂತಾಗಿತ್ತು. ಪತ್ರಕರ್ತರೂ ಜೈಲಿಗೆ ಹೋಗುವಂತಾಗಿತ್ತು ಎಂದು ನುಡಿದರು. ಸಂವಿಧಾನಕ್ಕೂ ತಿದ್ದುಪಡಿ ತಂದು ಅನೇಕ ಬದಲಾವಣೆ ಮಾಡಿದ್ದರು ಎಂದು ಖಂಡಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 75 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದರು.
 
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಎಸ್‍ಐಆರ್ ವಿರುದ್ಧ ಆಕ್ಷೇಪ ಎತ್ತಿದ್ದಾರೆ. ಕಾಂಗ್ರೆಸ್ಸಿನವರನ್ನು ಈ ರಾಜ್ಯ ಮತ್ತು ದೇಶದಿಂದ ಓಡಿಸುವ ಕೆಲಸವನ್ನು ಹಿಂದೂ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಎಚ್ಚರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನತೆಗೆ ಮತ್ತೊಂದು ಬರೆ: ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ, ಸಂಪೂರ್ಣ ವಿವರ ಇಲ್ಲಿದೆ