ದೇವ್ರಾಣೆ.. ನಾವು ಆಪರೇಷನ್ ಕಮಲ ಮಾಡ್ತಿಲ್ಲ: ಶಾಸಕ ಶ್ರೀರಾಮುಲು

ಗುರುವಾರ, 6 ಡಿಸೆಂಬರ್ 2018 (09:52 IST)
ಬೆಂಗಳೂರು: ದೇವರಾಣೆ ಹೇಳ್ತಿದ್ದೀನಿ.. ನಾವು ಆಪರೇಷನ್ ಕಮಲ ಮಾಡ್ತಿಲ್ಲ. ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದೆ.. ಹೀಗಂತ ಶಾಸಕ ಬಿ ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದೇವರ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ. ನಾವು ಆಪರೇಷನ್‍ ಕಮಲ ಮಾಡ್ತಿಲ್ಲ. ಬೇರೆಯವರಲ್ಲಿ ಭಯ ಹುಟ್ಟಿಸಲು ಬಿಜೆಪಿಯವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ತಾಕತ್ತಿದ್ದರೆ ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ಹಿಡಿತದಲ್ಲಿಟ್ಟುಕೊಳ್ಳಲಿ’ ಎಂದಿದ್ದಾರೆ.

ಇಷ್ಟು ದಿನ ನಮ್ಮ ಮೇಲೆ ಆಪರೇಷನ್ ಕಮಲದ ಆರೋಪ ಹೊರಿಸಿದರು. ಈಗ ನಮ್ಮ ಆಪ್ತ ಸಹಾಯಕರ ಮೇಲೆ ಆರೋಪ ಮಾಡ್ತಿದ್ದಾರೆ. ನಾವು ನಮ್ಮ ವರಿಷ್ಠರ ಮಾತು ಮೀರಿ ನಡೆಯಲ್ಲ. ಕುಣಿಯಲು ಆಗಲ್ಲ ಅಂದ್ರೆ ನೆಲ ಡೊಂಕು ಅನ್ನುವ ರೀತಿ ನಾಟಕ ಮಾಡಬಾರದು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಟೀಕಾ ಪ್ರಹಾರ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೋರ್ನ್ ವಿಡಿಯೋದಲ್ಲಿ ಕಂಡ ಮಹಿಳೆ ನೀನೇ ಎಂದು ಹಿಂಸಿಸುತ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?!