ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸುವಂತೆ ಆಟೋ ಚಾಲಕ ಸಂಘಟನೆಗಳು ನಾಳೆ ಸರ್ಕಾರದ ವಿರುದ್ದ ಬಂದ್ ಕರೆ ನೀಡಿವೆ. ಬೆಂಗಳೂರಿನ 21 ಆಟೋ ಚಾಲಕರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದು , ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ನಾಳೆ ಬೆಳಗ್ಗೆ ರೇಸ್ ಕೋರ್ಸ್ ನಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಹಾಕಲು ಆಟೋ ಸಂಘಟನೆಗಳು ನಿರ್ದರಿಸಿವೆ.ಇನ್ನು ನಾಳೆ ಆಟೋರಿಕ್ಷಾಗೆ ಅವಲಂಬಿತವಾಗಿರೋ ಸಾರ್ವಜನಿಕರು ಬೇರೆ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು .