Publish Date: Thu, 08 Jun 2023 (14:00 IST)
Updated Date: Thu, 08 Jun 2023 (14:36 IST)
ಬೆಂಗಳೂರಿನಲ್ಲಿ ಮತ್ತೊಂದು ಡ್ರಂಕ್ & ಡ್ರೈವ್ ಪ್ರಕರಣ ನಡೆದಿದೆ.ಅತಿವೇಗದಲ್ಲಿ ಸ್ಕೋಡಾ ಕಾರು ಚಾಲಕ ಕಾರು ಚಲಾಯಿಸಿದ್ದಾನೆ.ಈ ವೇಳೆ ನಿಯಂತ್ರಣ ತಪ್ಪಿ ಆಟೋ, ಡಸ್ಟರ್ ಕಾರಿಗೆ ಡಿಕ್ಕಿ ಹೊಡೆದಿದೆ.ಆಟೋ, ಕಾರಿಗೆ ಡಿಕ್ಕಿ ಹೊಡೆದು ಸ್ಕೋಡಾ ಕಾರು ಪಲ್ಟಿಯಾಗಿದೆ.ಕಾರಿನಲ್ಲಿದ್ದ ನಾಲ್ವರು ಯುವಕರು, ಯುವತಿಯರು ಪಾರಾಗಿದ್ದು,ಜೆಪಿ ನಗರದ ಅಂಡರ್ ಪಾಸ್ ಬಳಿ ಮಧ್ಯರಾತ್ರಿ ಘಟನೆ ನಡೆದಿದೆ.ವೆಗಾಸಿಟಿಯಿಂದ ಜೆಪಿ ನಗರದ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದ್ದು,ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ,ಸಣ್ಣಪುಟ್ಟ ಗಾಯಗಳೊಂದಿಗೆ 6 ಪ್ರಯಾಣಿಕರು ಪ್ರಯಾಣಿಕರು ಪರಾಗಿದ್ದು,ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.