Select Your Language

Notifications

webdunia
webdunia
webdunia
Thursday, 3 April 2025
webdunia

21 ವರ್ಷದ ಅರ್ಚಕನ ಹಿಂದೆ ಹೋದ ಆಂಟಿ; ಕಾಡಿನಲ್ಲಿ ಒಂಟಿ!

Aunty
bangalore , ಶುಕ್ರವಾರ, 24 ಜೂನ್ 2022 (20:13 IST)
21 ವರ್ಷದ ಯುವಕನ ಜೊತೆ ಪರಾರಿಯಾಗಿದ್ದ 2 ಮಕ್ಕಳ ತಾಯಿ ಈಗ ಕಾಡಿನಲ್ಲಿ ಆ ಕಡೆ ಸಂಸಾರವೂ ಇಲ್ಲದೇ ಬದುಕು ಇಲ್ಲದೇ ಒಂಟಿಯಾಗಿ ಅತಂತ್ರ ಸ್ಥಿತಿಯಲ್ಲಿರುವ ಕರುಣಾಜನಕ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಪೂಜಾರಿ ಜೊತೆ ಎಸ್ಕೇಪ್ ಆಗಿದ್ದ ಆಂಟಿ ಈಗ ಅತಂತ್ರಳಾಗಿದ್ದಾಳೆ. ತನ್ನೊಡನೆ ಬಂದ ಆಂಟಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪೂಜಾರಿ ಪರಾರಿಯಾಗಿದ್ದಾನೆ. ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಂಟಿ ಈಗ ಅತಂತ್ರಳಾಗಿರುವ ಆಂಟಿ ಕಾಡಂಚಿನಲ್ಲಿ ಪ್ರತ್ಯಕ್ಷಳಾಗಿದ್ದಾಳೆ.
21 ವರ್ಷದ ಅರ್ಚಕನ ಜೊತೆ ಆಂಟಿ ಪರಾರಿಯಾಗಿದ್ದಳು. ಈಕೆ ಎರಡು ಮಕ್ಕಳ ತಾಯಿಯಾಗಿದ್ದಾಳೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಚಿಗುರುಮೀಸೆಯ ಪೂಜಾರಿ ಈಗ ಕೈ ಕೊಟ್ಟಿದ್ದಾನೆ. ಆಕೆಯೊಂದಿಗೆ ಹತ್ತು ದಿನ ಒಡನಾಟ ಬೆಳೆಸಿ ನಂತರ ಕಾಡಂಚಿನಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಮೈಸೂರಿನ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಗೃಹಿಣಿ ಜೂನ್ 12 ರಂದು ತಂದೆ ಮನೆಯಿಂದ ನಾಪತ್ತೆಯಾಗಿದ್ದಳು.
ಮಹದೇಶ್ವರನ ದೇವಸ್ಥಾನಕ್ಕೆ ಹೋಗಿದ್ದಾಗ 21 ವರ್ಷದ ಅರ್ಚಕ ಸಂತೋಷ್ ಪರಿಚಯವಾಗಿದ್ದ. ಪರಿಚಯವಾದ ನಂತರ ಆಂಟಿ ಜೊತೆ ಸಲುಗೆ ಬೆಳೆಸಿದ್ದ ಅರ್ಚಕ ಸಂತೋಷ್, ನಿನಗೆ ಹೊಸ ಬಾಳು ಕೊಡುತ್ತೇನೆಂದು ನಂಬಿಸಿದ್ದ. ಪೂಜಾರಿ ಮಾತು ನಂಬಿ ಜೊತೆಯಲ್ಲಿ ಹೋದ ಗೃಹಿಣಿ ಈಗ ಮೋಸ ಹೋಗಿದ್ದಾಳೆ. ಹತ್ತು ದಿನಗಳ ಕಾಲ ಆಕೆಯೊಂದಿಗೆ ಸ್ವೇಚ್ಛಾಚಾರವಾಗಿ ತಿರುಗಾಡಿದ್ದ.
ನಂತರ ಆತ್ಮಹತ್ಯೆ ನಾಟಕವಾಡಿ ಕಾಡಿಗೆ ಕರೆತಂದಿದ್ದಾನೆ. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಸಂತೋಷ್ ನಾಪತ್ತೆಯಾಗಿದ್ದಾನೆ. ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಕಾಲ ಕಳೆದ ಗೃಹಿಣಿ ಮುಂಜಾನೆ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾಳೆ. ಗೃಹಿಣಿಯ ಕರುಣಾಜನಕ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಂಡನ ಮನೆಯೂ ಇಲ್ಲ, ಬಾಳು ಕೊಡುವುದಾಗಿ ನಂಬಿಸಿದ ಸಂತೋಷ್ ಸಹ ಇಲ್ಲ. ಈಗ ಗೃಹಿಣಿ ಅತಂತ್ರಕ್ಕೆ ಸಿಲುಕಿದ್ದಾಳೆ. ಸದ್ಯ ಸಂತೋಷ್ ಜೊತೆ ಇರುವುದಾಗಿ ಗೃಹಿಣಿ ಪಟ್ಟು ಹಿಡಿದಿದ್ದಾಳೆ. ಹುಲ್ಲಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೂಪಾಯಿ ಮೌಲ್ಯ ಮತ್ತೊಮ್ಮೆ ಸಾರ್ವಕಾಲಿಕ 78.32ಗೆ ಕುಸಿತ!