Publish Date: Tue, 08 Jan 2019 (06:59 IST)
Updated Date: Tue, 08 Jan 2019 (07:02 IST)
ಮುಂಬೈ : ತಾಯಿಗಾಗಿ ಕಾಯುತ್ತಿದ್ದ 12 ವರ್ಷದ ಬಾಲಕಿನಿಗೆ ಪಕ್ಕದ ಮನೆ ಆಂಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕನ ಪೋಷಕರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ತಂದೆಯ ಜೊತೆ ಇರುವ ಬಾಲಕ ಭಾನುವಾರ ರಜೆ ಇದ್ದ ಕಾರಣ ತನ್ನ ತಾಯಿಯನ್ನು ಭೇಟಿ ಮಾಡಲು ಆಕೆ ವಾಸವಿರುವ ಬಾಂದ್ರಾದಲ್ಲಿರುವ ಮನೆಗೆ ಬಂದಿದ್ದಾನೆ. ಮನೆಯಲ್ಲಿ ತಾಯಿ ಇರದ ಕಾರಣ ಹೊರಗಡೆ ಕಾಯುತ್ತಾ ಕುಳಿತಾಗ ಪಕ್ಕದ ಮನೆಯ 45 ವರ್ಷದ ಮಹಿಳೆ ಬಂದು ನಿನ್ನ ತಾಯಿ ಬರುವವರೆಗೂ ನಮ್ಮ ಮನೆಯಲ್ಲಿ ಕಾಯುತ್ತಿರು ಎಂದು ಹೇಳಿ ಬಾಲಕನನ್ನು ಕರೆದುಕೊಂಡು ಹೋಗಿ ಆತನ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾಳೆ.
ನಂತರ ಬಾಲಕನನ್ನು ಕರೆದುಕೊಂಡು ಹೋಗಲು ತಂದೆ ಬಂದಾಗ ಮಗ ಮೌನವಾಗಿರುವುದನ್ನು ಕಂಡು ಪ್ರಶ್ನಿಸಿದಾಗ ಆತ ನಡೆದ ವಿಚಾರವನ್ನು ತಂದೆಗೆ ಹೇಳಿದ್ದಾನೆ. ತಕ್ಷಣ ತಂದೆ ಈ ಬಗ್ಗೆ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದು, ಪೋಕ್ಸೋ ಕಾಯ್ಡೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.