ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಕಾಂಕ್ಷಿಗಳ ಪಟ್ಟಿ ಬಿಡುಗಡೆಗೆ ಬಿಜೆಪಿ ನಾನಾ ತಂತ್ರಗಳನ್ನ ಮಾಡ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬ್ಯಾಕ್ ಟು ಬ್ಯಾಕ್ ಸಭೆಗಳನ್ನ ಮಾಡಿದ್ರು ಇನ್ನು ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಯಾಕೆ ಮನಸ್ಸು ಮಾಡ್ತಿಲ್ಲಾ ಅನ್ನೋದು ರಾಜ್ಯ ನಾಯಕರಿಗೆ ತಲೆ ಬಿಸಿಯಾಗ್ತಿದೆ. ಕೊನೆಯ ಸಮಯದಲ್ಲೂ ಸರ್ವೆ ನಡೆಸಿ ಮಾಹಿತಿ ಪಡೆದುಕೊಳ್ತಿದ್ದಾರೆ ಹೈಕಮಾಂಡ್ ನಾಯಕರು. ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗ್ತಿದ್ರು ಇನ್ನೂ ಬಿಜೆಪಿ ಟಿಕೆಟ್ ಬಿಡುಗಡೆ ಮಾತ್ರ ಆಗಿಲ್ಲಾ.. ಒಂದು ಕಡೆ ರಾಜ್ಯ ಬಿಜೆಪಿ ನಾಯಕರಿಂದ ತಯಾರಾಗಿದ್ದ ಪಟ್ಟಿಗೆ ಹೈಕಮಾಂಡ್ ನಾಯಕರು ಸಂಪೂರ್ಣವಾಗಿ ಒಪ್ಪದೆ ತಮ್ಮದೆ ಆದ ನಿರ್ದಾರಕ್ಕೆ ಕಟ್ಟುಬಿದ್ದಿರೋದು ರಾಜ್ಯ ನಾಯಕರಿಗೆ ತಲೆ ಬಿಸಿ ಹೆಚ್ಚಾಗುವಂತೆ ಮಾಡಿದೆ.. ಸಮೀಕ್ಷೆಗಳ ಮೇಲೆ ಸಮೀಕ್ಷೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಸಿದ್ದತೆಗೆ ಅಳೆದುತೂಗಿ ಸಭೆಗಳ ಮೇಲೆ ಸಭೆ ಮಾಡ್ತಿದ್ದಾರೆ. ಇನ್ನು ಶನಿವಾರದಿಂದ ದೆಹಲಿಯಲ್ಲಿದ್ದು ಸಭೆಗಳನ್ನ ಮುಗಿಸಿ ಪಟ್ಟಿ ಬಿಡುಗಡೆ ಸಿದ್ದತೆ ಮಾಡದೆ ರಾಜ್ಯಕ್ಕೆ ವಾಪಾಸ್ಸಗಿರುವ ಬಿಎಸ್ ವೈ ನಡೆ ಬಗ್ಗೆ ಹಲವು ವಿಚಾರಗಳು ಚರ್ಚೆಯಾಗ್ತಿದೆ.
ಬಿಜೆಪಿ ಟಿಕೆಟ್ ಹಂಚಿಕೆ ಇನ್ನೂ ಪೂರ್ಣಗೊಂಡಿಲ್ಲ. ಪಟ್ಟಿ ಬಿಡುಗಡೆ ಇಂದು ನಾಳೆ ಅಂತ ಹೇಳಲಾಗುತ್ತಿದೆ. ಟಿಕೆಟ್ ಫೈನಲ್ ಸಂಬಂಧ ದೆಹಲಿಯಲ್ಲಿ ಎರಡು ದಿನಗಳ ಕಾಲ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು ಆಗಿರುವ ಬಿಎಸ್ ವೈ ಒಂದೆರಡು ಸಭೆಯಲ್ಲಿ ಭಾಗಿಯಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಭೆಯಿಂದ ಬಿಎಸ್ ವೈ ಅವರನ್ನು ಹೊರಗಿಟ್ಟ ಸಂಬಂಧ ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಇತ್ತ ಶಾಸಕರು ಹಾಗೂ ಸಂಸದರ ಮಕ್ಕಳಿಗೆ ಟಿಕೆಟ್ ಕೊಡುವ ಬದಲು ಕಾರ್ಯಕರ್ತರಿಗೆ ಟಿಕೆಟ್ ಕೊಡೋಣ ಅನ್ನೋ ಹೈಕಮಾಂಡ್ ನಿರ್ಧಾರ ಇದೀಗ ಅನೇಕರಿಗೆ ಕಬ್ಬಿಣದ ಕಡಲೆಯಾಗಿದೆ.
ಪ್ರಧಾನಿ ಮೋದಿ , ಅಮಿತ್ ಶಾ ನಿರ್ದಾರಗಳು ರಾಜ್ಯದ ಹಲವು ಶಾಸಕರು ಸೇರಿದಂತೆ ಸಚಿವರಿಗೆ ಭೀತಿ ಶುರುವಾಗಿದೆ. ಪದೇ ಪದೇ ಸಾಲು ಸಾಲು ಮೀಟಿಂಗ್ ಗಳನ್ನ ಮಾಡ್ತಿರುವ ಹೈಕಮಾಂಡ್ ನಾಯಕರು ಕೆಲ ಹಿರಿಯ ನಾಯಕರಿಗೆ ಶಾಕ್ ನೀಡೋದು ಕನ್ಫರ್ಮ್ ಆಗಿದೆ. ಹೊಸಬರಿಗೆ ಅವಕಾಶ ಕೊಡುವ ಸಲುವಾಗಿ ಮಾಜಿ ಸಿಎಂ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಹೊಸಬರಿಗೆ ಅವಕಾಶ ನೀಡುವಂತೆ ಹೊ ಸೂಚನೆ ನೀಡಿರುವುದು ಹಲವು ನಾಯಕರಿಗೆ ಆತಂಕ ಮೂಡಿಸಿದೆ... ಇದಕ್ಕೆ ಜಗದೀಶ್ ಶೆಟ್ಟರ್ ಕೊಟ್ಟಿರುವ ಉತ್ತರವು ಅಷ್ಟೆ ಖಡಕ್ ಆಗಿದೆ... ನಾನು ಚುನಾವಣೆಯಿಂದ ಹಿಂದೆ ಸರಿಯೊಲ್ಲಾ ಅಂತ ಹೈಕಮಾಂಡ್ ನಾಯಕರಿಗೆ ಕೊಟ್ಟಿರೋ ಉತ್ತರ ಬಂಡಾಯದ ಬಿಸಿ ಹೆಚ್ಚಾಗುವ ಮುನ್ಸೂಚನೆ ನೀಡಿದೆ
ಇನ್ನೂ ಮಾಜಿ ಸಚಿವ ಕೆಸ್ ಎಸ್ ಈಶ್ವರಪ್ಪ ಚುನಾವಣೆಯಿಂದ ಹಿಂದೆ ಸರಿದಿರೋದು ಮತ್ತೊಂದು ಸವಾಲು ಎದುರಾಗಿದೆ ಹೈಕಮಾಂಡ್ ನಾಯಕರಿಗೆ .. ಒಂದು ಕಡೆ ಜಗದೀಶ್ ಶೆಟ್ಟರ್ ಅವರನ್ನ ಕಡೆಗಣಿಸಿದ್ರೆ ಲಿಂಗಾಯತ ಸಮುದಾಯದ ಕೋಪಕ್ಕೆ ತುತ್ತಾಗಬೇಕಾಗುತ್ತೆ. ಇತ್ತ ಈಶ್ವರಪ್ಪ ನಡೆಯಿಂದ ಕುರುಬ ಸಮುದಾಯದ ಕೆಂಗಣ್ಣಿಗೂ ಗುರಿಯಾಗಬೇಕಾದ ಸಂಕಷ್ಟ ಎದುರುಗಬಹುದೆಂದು ಹೇಳಲಾಗ್ತಿದೆ.
ಇನ್ನೂ ಹೈಕಮಾಂಡ್ ನಾಯಕರ ನಿರ್ಧಾರದಿಂದ ಹಲವು ಸಚಿವರಿಗೂ ಆತಂಕ ಶುರುವಾಗಿದೆ.. ಹೈಕಮಾಂಡ್ ನಾಯಕರ ಪಟ್ಟಿಯಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಬಿಸಿ ನಾಗೇಶ್, ಸ್ಪೀಕರ್ ವಿಶ್ವೇಶ್ವರ ಹೆಗೆಡೆ ಕಾಗೇರಿ, ಶಾಸಕರಾದ ಉದಯ ಗರುಡಾಚಾರ್, ಸಿದ್ದು ಸವದಿ, ಅನಿಲ್ ಬೆನಕೆ, ಸಚಿವ ಸೋಮಣ್ಣ, ಅಂಗಾರಾ, ಲಾಲಜಿ ಮೆಂಡನ್ , ಸುಕುಮಾರ್ ಶೆಟ್ಟಿ, ತಿಪ್ಪಾರೆಡ್ಡಿ ಸೇರಿದಂತೆ 30 ಹಾಲಿ ಶಾಸಕರು ಸೇರಿದಂತೆ ಸಚಿವರಿಗೆ ಕೋಕ್ ನೀಡುವ ಸಾದ್ಯತೆ ಹೆಚ್ಚಾಗಿದೆ.. ನೆಹರು ಓಲೇಕಾರ್, ಮಾಡಳ್ ವಿರೂಪಾಕ್ಷಪ್ಪ, ಎಂಪಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ವಿಚಾರದಲ್ಲಿ ಟಿಕೆಟ್ ನೀಡದಿರುವ ಬಗ್ಗೆ ಹೈಕಮಾಂಡ್ ದೃಡ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಹೈಕಮಾಂಡ್ ನಾಯಕರ ಹೈ ವೋಲ್ಟೇಜ್ ಸಭೆ ಆಕಾಂಕ್ಷಿಗಳನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.. ಒಂದು ಕಡೆ ಹಿರಿಯರನ್ನ ಕೈ ಬಿಟ್ಟು ಕಟ್ಟಕಡೆಯ ಕಾರ್ಯಕರ್ತರನ್ನ ಮುಂಚೂಣಿಗೆ ತರುವಲ್ಲಿ ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ... ಆದ್ರೆ ಇದು ವರ್ಕೌಟ್ ಆಗದೆ ಅಸಮದಾನ ಬಂಡಾಯ ಹೆಚ್ಚಾದ್ರೆ ವಿಪಕ್ಷವಾದ ಕಾಂಗ್ರೆಸ್ ನಾಯಕರಿಗೆ ಇದು ಲಾಭ ಆಗೊದ್ರಲ್ಲಿ ಯಾವುದೇ ಅನುಮಾನವಿಲ್ಲಾ ಅಂತಾ ಹೇಳಲಾಗ್ತಿದೆ. ಟಿಕೆಟ್ ಬಿಡುಗಡೆ ಕ್ಷಣಗಣನೆ ಶುರುವಾಗಿದ್ದು ಇಂದು ತಡ ರಾತ್ರಿ ಇಲ್ಲಾ ನಾಳೆ ಪಟ್ಟಿ ಬಿಡುಗಡೆ ಮಾಡಲಾಗುವ ಸಾದ್ಯತೆ ಜೊತೆಗೆ ಅನಿವಾರ್ಯವು ಇದೆ... ಹಿರಿಯ ನಾಯಕರ ಬಂಡಾಯ ಅಸಮದಾನದ ಶಮನಕ್ಕೆ ಹೈಕಮಾಂಡ್ ಯಾವ ತಂತ್ರ ಅನುಸರಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.