Select Your Language

Notifications

webdunia
webdunia
webdunia
webdunia

ಕೊನೆಗೂ ಪೊಲೀಸರ ಬಲೆಗೆ ಬಿದ್ದ ಅರೋಪಿ ರವಿಕುಮಾರ್

ಕೊನೆಗೂ ಪೊಲೀಸರ ಬಲೆಗೆ ಬಿದ್ದ ಅರೋಪಿ ರವಿಕುಮಾರ್
bangalore , ಸೋಮವಾರ, 21 ನವೆಂಬರ್ 2022 (15:13 IST)
ಮತದಾರರ ಪಟ್ಟಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರವಿಕುಮಾರ್ ನನ್ನ ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.ಒಟ್ಟು ಐವರ ಬಂಧನವಾಗಿದೆ.ಆರೋಪಿ ರವಿಕುಮಾರ್ ತುಮಕೂರು, ಉತ್ತರ ಕನ್ನಡ, ಶಿರಸಿ‌ ಭಾಗದಲ್ಲಿ ಓಡಾಡಿದ್ದ.ಅಂತಿಮವಾಗಿ ಬೆಂಗಳೂರಿನಲ್ಲೇ ಆರೋಪಿಯನ್ನ ಬಂಧಿಸಲಾಗಿದೆ.ಈಗಾಗಲೇ ಬಂಧನವಾದವರ ಜೊತೆಗೆ ರವಿಕುಮಾರ್ ವಿಚಾರಣೆ ಮಾಡಲಿದ್ದೇವೆ .ಉಳಿದಂತೆ ಪಿ.ಆರ್.ಓಗಳು, ಸಿಬ್ಬಂದಿ ಸಹಿತ ಸುಮಾರು 15 ಜನರಿಗೆ ನೋಟಿಸ್ ನೀಡಲಾಗಿದೆ.
 
ವಕೀಲರ ಭೇಟಿಗೆ ಬಂದು ಆರೋಪಿ ಪೊಲೀಸರಿಗೆ ತಗಲಾಕ್ಕೊಂಡಿದ್ದಾನೆ.ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ರವಿಕುಮಾರ್ ತುಮಕೂರು, ತಿಪಟೂರು, ಶಿರಸಿ ಭಾಗದಲ್ಲಿ‌ ಓಡಾಡಿದ್ದ.ಆರೋಪಿಯ ಪತ್ತೆಗೆ ಬೆನ್ನುಬಿದ್ದಿದ್ದ ವಿಶೇಷ ತಂಡ ವಕೀಲರ ಭೇಟಿಗೆ ಬಂದಾಗ ಆರೋಪಿಯ ಬಂಧನ ಮಾಡಿದ್ದಾರೆ.ಲಾಲ್ ಬಾಗ್ ಬಳಿ ಆರೋಪಿಯನ್ನ  ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
 
ಇದುವರೆಗೂ ಐವರ ಬಂಧನವಾಗಿದ್ದು ,ಧರ್ಮೇಶ್, ರೇಣುಕಾ ಪ್ರಸಾದ್ - ಚಿಲುಮೆ ಸಂಸ್ಥೆಯ ಸಿಬ್ಬಂದಿ .ಕೆಂಪೇಗೌಡ - ರವಿಕುಮಾರ್ ಸಹೋದರ &  ಸಂಸ್ಥೆಯ ಮೇಲ್ವಿಚಾರಕ.ಪ್ರಜ್ವಲ್ - ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ ,ರವಿಕುಮಾರ್ - ಚಿಲುಮೆ ಸಂಸ್ಥೆಯ ಮುಖ್ಯಸ್ಥನನದನ ಈಗ ಬಂಧಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅವಾಚ್ಯವಾಗಿ ನಿಂದಸಿ,ಬೆದರಿಕೆ ಹಾಕಿದ ಕಾಮಿಡಿ ನಟಿ ನಯನಾ ವಿರುದ್ಧ ಕೇಸ್