Webdunia - Bharat's app for daily news and videos

Install App

ರವಿವಾರ ರಾತ್ರಿ 9 ಗಂಟೆಗೆ ಲೈಟ್ ಮಾತ್ರ ಬಂದ್ ಮಾಡಿ, ಮೇನ್ ಸ್ವಿಚ್ ಆನ್ ಇರಲಿ

Webdunia
ಶನಿವಾರ, 4 ಏಪ್ರಿಲ್ 2020 (20:52 IST)
ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಲು ಕರೆ ನೀಡಿದ್ದು, ಮನೆಯಲ್ಲಿನ ಲೈಟ್ ಮಾತ್ರ ಬಂದ್ ಮಾಡಿ, ಮೇನ್ ಸ್ವಿಚ್ ಆನ್ ಇರಲಿ ಎಂದು ಜೆಸ್ಕಾಂ ತಿಳಿಸಿದೆ.

ದೇಶದ ಪ್ರಧಾನಮಂತ್ರಿಯವರು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಲು ರವಿವಾರ ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷದ ವರೆಗೆ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇವಲ ದೀಪದ ಲೈಟ್‍ಗಳನ್ನು ಮಾತ್ರ ಅರಿಸಬೇಕು ವಿನಹ ಮನೆಯ ಮೇನ್ ಸ್ವಿಚ್ ಆಫ್ ಮಾಡಬಾರದೆಂದು ಜೆಸ್ಕಾಂ ನಿಗಮದ ಮುಖ್ಯ ಇಂಜಿನೀಯರ್ (ಕಾರ್ಯಾಚರಣೆ) ಲಕ್ಷ್ಮಣ ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ಕರೆಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿ ವಿದ್ಯುತ್ ದೀಪಗಳನ್ನು  ಸ್ವಿಚ್ ಆಫ್ ಮಾಡಿ ಕ್ಯಾಂಡಲ್ ದೀಪ, ಎಣ್ಣೆ ದೀಪ, ಟಾರ್ಚ್ ಲೈಟ್, ಮೊಬೈಲ್ ಫ್ಲಾಶ್ ಲೈಟ್‍ಗಳನ್ನು ಮನೆಯ ಬಾಗಿಲ ಬಳಿ ಅಥವಾ ಬಾಲ್ಕನಿಗಳಲ್ಲಿ ಬೆಳಗಿಸುವ ಮೂಲಕ ವಿಶ್ವದಾದ್ಯಂತ ಹರಡಿರುವ ಕೊರೋನಾ ಸಾಂಕ್ರಾಮಿಕ ಹೋರಾಟಕ್ಕೆ ದೇಶದ ಜನತೆ ಒಂದಾಗಿದ್ದೇವೆ ಎಂಬ ಸಂದೇಶ ಸಾರಲು ತಿಳಿಸಿದ್ದಾರೆ.
ರಾಜ್ಯದ ವಿದ್ಯುತ್ ಜಾಲ ಸದೃಢವಾಗಿರುವುದರಿಂದ ಸಾರ್ವಜನಿಕರು ಕೇವಲ ದೀಪದ ಲೈಟ್‍ಗಳು ಮಾತ್ರ ಆರಿಸಬೇಕು. ಉಳಿದಂತೆ ಮನೆಯ ಇತರೆ  ಗೃಹೋಪಯೋಗಿ ಉಪಕರಣಗಳಾದ ಫ್ಯಾನ್, ಫ್ರೀಜ್, ಎ.ಸಿ.ಗಳು ಚಾಲ್ತಿಯಲ್ಲಿರಲಿ. ಯಾವುದೇ ಕಾರಣಕ್ಕೂ ಮೈನ್ ಸ್ವಿಚ್ ಆಫ್ ಮಾಡಬಾರದು ಎಂದಿದ್ದಾರೆ.

ಈ ಒಂಭತ್ತು ನಿಮಿಷದ ಅವಧಿಯಲ್ಲಿ ಎಂದಿನಂತೆ ಬೀದಿ ದೀಪಗಳು, ಸಾರ್ವಜನಿಕ ಸ್ಥಳಗಳಲ್ಲಿನ ದೀಪಗಳು, ಅವಶ್ಯಕ ಸೇವೆಗಳಲ್ಲಿ ಬರುವ ಆಸ್ಪತ್ರೆಗಳು,  ಪೊಲೀಸ್ ಠಾಣೆಗಳು, ಸಾರ್ವಜನಿಕರು ಬಳಸುವಂತಹ  ಕಚೇರಿಗಳಲ್ಲಿ ವಿದ್ಯುತ್ ದೀಪಗಳು ಚಾಲ್ತಿಯಲ್ಲಿರಿಸಲು ಅವರು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments