Select Your Language

Notifications

webdunia
webdunia
webdunia
webdunia

ಹೈಕಮಾಂಡ್ ಪ್ರಿಪರೇಟರಿ ಎಕ್ಸಾಂ… `ಕೈ’ ಮುಖಂಡರ ಫೈನಲ್ ಪರೀಕ್ಷೆ ಕಿತ್ತಾಟ

ಹೈಕಮಾಂಡ್ ಪ್ರಿಪರೇಟರಿ ಎಕ್ಸಾಂ… `ಕೈ’ ಮುಖಂಡರ ಫೈನಲ್ ಪರೀಕ್ಷೆ ಕಿತ್ತಾಟ
ಬೆಂಗಳೂರು , ಮಂಗಳವಾರ, 10 ಅಕ್ಟೋಬರ್ 2017 (12:03 IST)
ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ತಿಂಗಳ ಅಂತ್ಯಕ್ಕೆ ಪಟ್ಟಿ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಸದ್ಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ತಮ್ಮ ಬೆಂಬಲಿಗರಿಗೆ ಮಣೆ ಹಾಕುವ ವಿಚಾರದಲ್ಲಿ ಸಿಎಂ, ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಶುರುವಾಗಿದೆ.

ಈ ಮೂವರ ನಾಯಕರಿಗೂ ಸಿಎಂ ಸ್ಥಾನದ ಮೇಲೆ ಕಣ್ಣಿದೆ. ಹೀಗಾಗಿ ತಮ್ಮ ಬೆಂಬಲಿಗರಿಗೆ ಹೆಚ್ಚು ಟಿಕೆಟ್ ಕೊಡಿಸಬೇಕು ಅನ್ನೋ ಲೆಕ್ಕಾಚಾರ ಮೂವರಿಗೂ ಇದೆ. ಆದರೆ ಹೈಕಮಾಂಡ್ ನಡೆಸುತ್ತಿರುವ ಪ್ರಿಪರೇಟರಿ ಎಕ್ಸಾಂಲ್ಲಿಯೇ ಹಸ್ತದ ಮುಖಂಡರ ಫೈನಲ್ ಪರೀಕ್ಷೆ ಕಿತ್ತಾಟ ಶುರುವಾಗಿದೆ.

ಸಂಭಾವ್ಯ ಅಭ್ಯರ್ಥಿ ಪಟ್ಟಿ ಮಾತ್ರವಲ್ಲದೆ,  ಪಕ್ಷಕ್ಕೆ ಕೈ ಕೊಡುವವರು, ಒಂದು ವೇಳೆ `ಕೈ’ ಕೊಟ್ರೆ ಪರ್ಯಾಯ ಅಭ್ಯರ್ಥಿ ಯಾರು ಎಂಬ ಬಗ್ಗೆಯೂ ಮಾಹಿತಿ ಕೇಳಿದೆ. ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರಲು ಮನಸು ಮಾಡುತ್ತಿರುವವರ ಪಟ್ಟಿಯನ್ನೂ ಹೈಕಮಾಂಡ್ ಕೇಳಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸಂಭಾವ್ಯ ಅಭ್ಯರ್ಥಿ ಪಟ್ಟಿ ಕಾಂಗ್ರೆಸ್ ಗೆ ವರವಾಗುತ್ತಾ ಅಥವಾ ಶಾಪವಾಗುತ್ತಾ ಅಂತ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಪ್ರಧಾನಿ ಮೋದಿ ವಿರುದ್ಧ ಗುಜರಾತ್ ನಲ್ಲಿ ಗುಡುಗಿದ ರಾಹುಲ್ ಗಾಂಧಿ