ಬೆಂಗಳೂರು: 2013ರ ಕೆಜಿಎಫ್ ಗಲಾಟೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಚಿವ ಕೆ.ಹೆಚ್ ಮುನಿಯಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಆದೇಶ ಹೊರಡಿಸಿದೆ.
2013ರ ವಿಧಾನಸಭಾ ಚುನಾವಣೆಯ ವೇಳೆ ಕೆಜಿಎಫ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಅವರ ಮೇಲೆ, ಆಗ ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿತ್ತು.
ಇನ್ನೂ ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಿದ್ದಕ್ಕೆ ಬಂಧನ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿ ಗಜಾನನ ಭಟ್ ಎಚ್ಚರಿಕೆ ನೀಡಿದರು.
ಬಳಿಕ ಲಕ್ಷ್ಮೀ ನಾರಾಯಣ್ ಮತ್ತು ಮುನಿಯಪ್ಪ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾದರು. ಅಲ್ಲದೇ ಇಬ್ಬರು ನ್ಯಾಯಾಧೀಶರ ಮುಂದೆ ಹಾಜರಾದರು. ಗೈರಾಗಿದ್ದಕ್ಕೆ ಇತ್ತ ಜಡ್ಜ್ ಸಂತೋಷ್ ಗಜಾನನ ಭಟ್ ಗರಂ ಆಗಿದ್ದರು. ಖುದ್ದು ಹಾಜರಾಗದಿದ್ದರೆ ಅರೆಸ್ಟ್ ವಾರೆಂಟ್ ಹೊರಡಿಸುವುದಾಗಿ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್ಗೆ ಸಚಿವ ಮುನಿಯಪ್ಪ ಓಡೋಡಿ ಬಂದಿದ್ದು, ಇದೀಗ ಜಾಮೀನು ಮಂಜೂರು ಮಾಡಲಾಗಿದೆ.<>