Publish Date: Tue, 05 Jun 2018 (18:53 IST)
Updated Date: Tue, 05 Jun 2018 (18:54 IST)
ಪತಿಯನ್ನು ಕೊಂದು ಸಹಜ ಸಾವು ಎಂದು ನಾಟಕವಾಡಿದ್ದ ಪತ್ನಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಾವ್ಯ ಅಲಿಯಾಸ್ ಭಾರತಿ(40) ಬಂಧಿತ ಮಹಿಳೆಯಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೇ 2 ರಂದು ಓಂ ನಗರದ ನಿವಾಸದಲ್ಲಿ ಪತಿ ಶಿವಯೋಗಿ ಹಳೆಮನೆಯನ್ನ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ್ದಳು. ಬಳಿಕ ಮಂಚದ ಮೇಲಿಂದ ಬಿದ್ದು ಸತ್ತಿದ್ದಾರೆಂದು ಎಂದು ಕಥೆ ಕಟ್ಟಿದ್ದಳು.
ಆದ್ರೆ ಶಿವಯೋಗಿ ಸಹೋದರಿ ರಾಜೇಶ್ವರಿಯಿಂದ ಸಂಶಾಯಸ್ಪದ ಸಾವೆಂದು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಅನ್ವಯ ವಿದ್ಯಾ ನಗರ ಪೊಲೀಸರು ಕಾವ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರ ಮುಂದೆ ತಾನೇ ಕೊಲೆ ಮಾಡಿರೋದಾಗಿ ತಪ್ಪೋಪ್ಪಿಕೊಂಡಿದ್ದಾಳೆ.
ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ಮಾಡಿರುವುದಾಗಿ ಹೇಳಿದ್ದು, ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.