Select Your Language

Notifications

webdunia
webdunia
webdunia
webdunia

ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿಯನ್ನು ಬಂಧಿಸಿ : ಡಿಕೆಶಿ

ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿಯನ್ನು ಬಂಧಿಸಿ : ಡಿಕೆಶಿ
ರಾಮನಗರ , ಮಂಗಳವಾರ, 22 ನವೆಂಬರ್ 2022 (11:13 IST)
ರಾಮನಗರ : ವೋಟರ್ ಐಡಿ ಅಕ್ರಮ ಪ್ರಕರಣದ ಒಬ್ಬ ಕಿಂಗ್ ಪಿನ್ ಬಂಧನ ಮಾಡಿದ್ರೆ ಸಾಲದು. ಇದರ ಹಿಂದೆ ಯಾರಿದ್ದಾರೆ? ಯಾವ ರಾಜಕಾರಣಿ ಇದ್ದಾರೆ? ಯಾವ ಮಂತ್ರಿ ಇದ್ದಾರೆ ಎಲ್ಲವೂ ತನಿಖೆ ಆಗಬೇಕು.

ಮುಖ್ಯಮಂತ್ರಿ, ಜಿಲ್ಲಾ ಮಂತ್ರಿಗಳೂ ಪ್ರಕರಣದಲ್ಲಿ ಭಾಗಿ ಆಗಿದ್ದರೆ ಅವರ ಬಂಧನ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆಯಲ್ಲಿ ಕೆಲಸಕ್ಕೆ ಬಂದಿರುವ ಪಾಪ ಹುಡುಗ ಏನು ಮಾಡ್ತಾನೆ. ಅಗ್ರಿಮೆಂಟ್ ಮಾಡಿಕೊಟ್ಟವರು ಯಾರು? ಆದೇಶ ಕೊಟ್ಟವರು ಯಾರು? ಮೇಲಿನವರಿಂದ ಆದೇಶ ಬಂತು ಅಂತ ಅಲ್ಲಿನ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಅಂದಮೇಲೆ ಆ ಮೇಲಿನವರು ಅಂದ್ರೆ ಯಾರು? ಮುಖ್ಯಮಂತ್ರಿಗಳಾ? ಅಥವಾ ಸಚಿವರಾ ಎಂಬುದು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ಹೋಂ ಟು ಮೆಟ್ರೋ ಸ್ಟೇಷನ್ ಮಿನಿಬಸ್