Webdunia - Bharat's app for daily news and videos

Install App

ಅಮೆಜಾನ್ ಅಫೀಸಿಯಲ್ ಅಕೌಂಟ್ ನ ಹ್ಯಾಕ್ ಮಾಡಿದವರ ಬಂಧನ

Webdunia
ಗುರುವಾರ, 17 ಆಗಸ್ಟ್ 2023 (16:00 IST)
ಹ್ಯಾಕರ್ ಮೂಲಕ ಅಮೆಜಾನ್ ಕಂಪನಿಗೆ ಚೀಟಿಂಗ್ ಮಾಡ್ತಿದ್ದ ಆರೋಪಿಯನ್ನ ಬಂಧಿಸಿ ಸುಮಾರು 52ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ ಗಳು, ಕ್ಯಾಶ್ ವಶಕ್ಕೆ ಪಡೆಯಲಾಗಿದೆ.16ಐಫೋನ್, ಐಮ್ಯಾಕ್ ಸಿಸ್ಟಮ್, 30ಲಕ್ಷ ಹಣ ಪೊಲೀಸರು ಸೀಜ್ ಮಾಡಿದ್ದಾರೆ.ಮಲಯಾಳಂ ಸಿನಿಮಾ ರೀತಿಯಲ್ಲಿ ಅಮೆಜಾನ್ ಗೆ ವಂಚನೆ ಮಾಡಿದ್ದಾರೆ.ದುಲ್ಕರ್ ಸಲ್ಮಾನ್ ಸಿನಿಮಾದ ರೀತಿಯಲ್ಲಿ ಆರೋಪಿಗಳು ವಂಚಿಸಿದ್ದಾರೆ.
 
ಅಮೇರಿಕಾದಲ್ಲಿ ಕೂತು ಅಮೆಜಾನ್ ಗೆ ವಂಚನೆ ಮಾಡ್ತಿದ್ದ ಹ್ಯಾಕರ್ ಮೊದಲು ಆನ್ಕೈನ್ ಮೂಲಕ ಐಫೋನ್ ಗಳನ್ನ ಬುಕ್ ಮಾಡ್ತಿದ್ರು .ನಂತರ ಅಮೇರಿಕಾದಲ್ಲಿರೋ ಹ್ಯಾಕರ್ ಗೆ ಮಾಹಿತಿ ನೀಡ್ತಿದ್ದರು.ಕೈಗೆ ಮೊಬೈಲ್ ಬಂದಿದೆ ಎಂದ ಕೂಡಲೇ ಹ್ಯಾಕರ್ ಆಟ ಶುರು ಮಾಡ್ತಿದ್ರು.ಅಮೆಜಾನ್ ಅಫೀಸಿಯಲ್ ಅಕೌಂಟ್ ನ ಹ್ಯಾಕ್ ಮಾಡಿ ವಂಚನೆ ಮಾಡ್ತಿದ್ರು.ಅಮೆಜಾನ್ ಅಕೌಂಟ್ ನಲ್ಲಿ ಬಂದಿದ್ದ ಐಫೋನ್ ರಿಟರ್ನ್ ಬಂದಿರೋ ತರ ಆಪ್ಸನ್  ಕ್ಲಿಕ್ ಮಾಡ್ತಿದ್ದ ಹ್ಯಾಕರ್ ಅಲ್ಲಿ ರಿಟರ್ನ್ ಆಪ್ಸನ್ ಓಕೆ ಆಗಿದ್ದೇ ತಡ ಆನ್ಲೈನ್ ನಲ್ಲಿ ಚಿರಾಗ್ ಗೆ ಹಣ ರೀಫಂಡ್ ಆಗ್ತಿತ್ತು.ಕಳೆದ ಒಂದು ತಿಂಗಳಿಂದ ಇದೇ ರೀತಿ ವಂಚನೆ ಮಾಡ್ತಿದ್ರು.ದೇಶಾದ್ಯಂತೆ ಇಪ್ಪತ್ತು ಕೋಟಿಗೂ ಅಧಿಕ ವಂಚನೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
 
ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ.ಈ ಬಗ್ಗೆ ಮಾಹಿತಿ ಬಂದಿದ್ದೇ ತಡ ಯಶವಂತಪುರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಸದ್ಯ ಮೊಬೈಲ್ ಬುಕ್‌ ಮಾಡಿ ಹ್ಯಾಕರ್ ಗೆ ಮಾಹಿತಿ ನೀಡ್ತಿದ್ದ ಚಿರಾಗ್ ಬಂಧನ ಮಾಡಲಾಗಿದೆ.ಅಮೇರಿಕಾದಲ್ಲಿರೋ ಹ್ಯಾಕರ್ ಪತ್ತೆಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ: ಕೆಎನ್ ರಾಜಣ್ಣ

ವಿಮಾನ ದುರಂತವಾಗಿ ವಾರ ಕಳೆಯುವಷ್ಟರಲ್ಲೇ ಏರ್ ಇಂಡಿಯಾ ಸಿಬ್ಬಂದಿಗಳ ಪಾರ್ಟಿ: ವಿಡಿಯೋ

ಮಲೆ ಮಹದೇಶ್ವರ ಬೆಟ್ಟ: ಹುಲಿಗಳಿಗೆ ವಿಷ ಪ್ರಾಷನ ಮಾಡಿದ ಇಬ್ಬರು ಕೊನೆಗೂ ಬಂಧನ

Gold Price: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments