ಆಪ್ತಮಿತ್ರ ಸಿನಿಮಾ ಕತೆ ಹೇಳಿ ಯುವತಿಗೆ ವಂಚಿಸಿದ ಜ್ಯೋತಿಷಿ ಅರೆಸ್ಟ್

ಬುಧವಾರ, 21 ಆಗಸ್ಟ್ 2019 (12:12 IST)
ಬೆಂಗಳೂರು : ಆಪ್ತಮಿತ್ರ ಸಿನಿಮಾದ ಕತೆಯಂತೆ ಮರುಜನ್ಮದ ಕತೆ ಹೇಳಿ ಯುವತಿಯೊಬ್ಬಳನ್ನು ಜ್ಯೋತಿಷಿಯೊಬ್ಬ ಯಾಮಾರಿಸಿ ವಂಚನೆ ಮಾಡಿದ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.
ಸ್ವಾಮಿ ವೆಂಕಟ ಕೃಷ್ಣಾಚಾರ್ಯ (28)  ಡೋಂಗಿ ಜ್ಯೋತಿಷಿಯಾಗಿದ್ದು, ಈತ ಶ್ರೀನಿವಾಸನಗರದ ಮನೆಯೊಂದರಲ್ಲಿ ವಾಸ್ತುದೋಷವಿದೆ ಎಂದು ಹೋಮ ಮಾಡಿಸಿ ಅದೇ ಮನೆ ಯುವತಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದ. ಕಳೆದ ಜನ್ಮದಲ್ಲಿ ನಾವಿಬ್ಬರೂ ಗಂಡ ಹೆಂಡತಿಯಾಗಿದ್ದೆವು. ಕಳೆದ ಜನ್ಮದಲ್ಲಿ ನೀನು ಭರತನಾಟ್ಯದ ಕಲಾವಿದೆಯಾಗಿದ್ದೆ. ನಾನೇ ನಿನ್ನ ಸಾವಿಗೆ ಕಾರಣನಾಗಿದ್ದೆ. ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನ ಮದುವೆಯಾದಾಗ ಮಾತ್ರ ನನಗೆ ಮೋಕ್ಷ ಎಂದು ಆ ಯುವತಿಯ ಬಳಿ ಪುನರ್ಜನ್ಮದ ಕತೆ ಹೇಳಿ ಜ್ಯೋತಿಷಿ ಆ ಯುವತಿಯನ್ನು ನಂಬಿಸಿದ್ದ.


ಅಲ್ಲದೇ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಹೆಸರಲ್ಲಿ 30 ಲಕ್ಷ ಸಾಲ ಪಡೆದಿದ್ದ. ಪೊಲೀಸರಿಗೆ ದೂರು ನೀಡಿದರೆ ತನ್ನ ತಪೋಶಕ್ತಿಯಿಂದ ಕೈ-ಕಾಲು ಬೀಳಿಸುವುದಾಗಿ ಆಕೆ ಹಾಗೂ ಆಕೆಯ ಮನೆಯವರಿಗೆ ಬೆದರಿಕೆಯೊಡ್ಡಿದ್ದ. ಆದರೆ ಇದೀಗ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ ಹಿನ್ನಲೆಯಲ್ಲಿ ಇದೀಗ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೋ ಬಾಲ್ ಗೆ ರನೌಟ್ ಆಗಿದ್ದೇನೆ. ಅದಕ್ಕೆ ಬೇಸರವಿದೆ.- ರಾಜುಗೌಡ