Select Your Language

Notifications

webdunia
webdunia
webdunia
webdunia

ದೇವೇಗೌಡರ ಕುಟುಂಬವು ಮುಡಾ ಫಲನುಭವಿಗಳಲ್ಲವೇ: ಸಿಎಂ ಸಿದ್ದರಾಮಯ್ಯ

MUDA Scam

Sampriya

ಮೈಸೂರು , ಸೋಮವಾರ, 29 ಜುಲೈ 2024 (13:36 IST)
ಮೈಸೂರು:  ನನ್ನ 40 ವರ್ಷದ ರಾಜಕಾರಣ ಜೀವನದಲ್ಲಿ ನಾನು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಈಗ ವಿಪಕ್ಷಗಳು ನನ್ನ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಾಕಷ್ಟು ಹಗರಣ ಮಾಡಿದ್ದು, ಅವರು ಯಾವುದೇ ಪ್ರಕರಣವನ್ನು ತನಿಖೆಗೆ ನೀಡಿಲ್ಲ. ಮುಡಾ ಹಗರಣದಲ್ಲಿ ನನಗೆ ಬೇಜಾರಿಲ್ಲ, ಯಾಕೆಂದರೆ ನಾನು ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ 19 ಸಂದರ್ಭದಲ್ಲಿ 3 ರಿಂದ 4 ಸಾವಿರ ಕೋಟಿ ರೂಪಾಯಿಯನ್ನು ಬಿಜೆಪಿಯವರು ನುಂಗಿ ಹಾಕಿದ್ದಾರೆ. ಈ ಸಂಬಂಧ ನಾನು ನ್ಯಾಯಾಂಗ ತನಿಖೆ ಅಥವಾ ಸಿಬಿಐ ಗೆ ವಹಿಸಲು ಕೊಡಿ ಎಂದು ಒತ್ತಾಯ ಮಾಡಿದ್ದೆ, ಆದರೆ ಅವರು ತನಿಖೆಗೆ ನೀಡಿಲ್ಲ.

ಮುಡಾದಿಂದ ಎಷ್ಟು ನಿವೇಶನಗಳು ದೇವೇಗೌಡರ ಕುಟುಂಬಕ್ಕೆ ಹೋಗಿದೆ ಎಂದು ಪ್ರಶ್ನಿಸಿದ ಅವರು ಬಹಳ ಮಾತನಾಡುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯವರು 1984 ರಲ್ಲಿ ಕೈಗಾರಿಕಾ ನಿವೇಶನವನ್ನು ಪಡೆದರು. ಸ್ವಾದೀನಕ್ಕೆ ಕೂಡ ಪಡೆದಿದ್ದಾರೆ. ನಂತರ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭರ್ತಿಯಾದ ಕೆಆರ್‌ಎಸ್: ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಶಿವಕುಮಾರ್