Webdunia - Bharat's app for daily news and videos

Install App

Arecanut price today: ಅಡಿಕೆ, ಕಾಳುಮೆಣಸು ಇಂದಿನ ದರ ಹೀಗಿದೆ ನೋಡಿ

Krishnaveni K
ಶುಕ್ರವಾರ, 21 ಮಾರ್ಚ್ 2025 (10:08 IST)
ಬೆಂಗಳೂರು: ಸತತ ಏರುಗತಿಯಲ್ಲಿದ್ದ ಅಡಿಕೆ ಬೆಲೆ ಕಳೆದ ಒಂದು ವಾರದಿಂದ ಸ್ಥಿರವಾಗಿದೆ. ಇಂದೂ ಕೂಡಾ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು ಮತ್ತು ಕೊಬ್ಬರಿ ಬೆಲೆ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ.

ಕಳೆದ ಕೆಲವು ದಿನಗಳಿಂದ ಅಡಿಕೆ, ಕಾಳುಮೆಣಸು ದರ ನಿಂತ ನೀರಾಗಿದೆ. ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಆದರೆ ಹಾಗಂತ ಕಡಿಮೆಯೂ ಆಗಿಲ್ಲ ಎನ್ನುವುದು ಗಮನಾರ್ಹ. ಇಂದಿನ ಮಾರುಕಟ್ಟೆ ದರ ಹೇಗಿದೆ ಇಲ್ಲಿದೆ ವಿವರ.

ಹೊಸ ಅಡಿಕೆಗೆ ನಿನ್ನೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಗರಿಷ್ಠ 400 ರೂ.ಗಳಷ್ಟಿತ್ತು. ಇದು ಇಂದೂ ಮುಂದುವರಿದಿದೆ. ಫ್ರೆಶ್ ಚೋಲ್ ಅಡಿಕೆಗೆ ಗರಿಷ್ಠ 455 ರಷ್ಟಿತ್ತು. ಅದೀಗ 460 ರೂ.ಗೆ ತಲುಪಿದೆ. ಡಬಲ್ ಚೋಲ್ ಅಡಿಕೆಗೆ 495 ರೂ.ಗಳಷ್ಟು ದರವಿತ್ತು. ಇಂದೂ ಅದೇ ದರ ಮುಂದುವರಿದಿದೆ. ಇಂದಿನ ಮಾರುಕಟ್ಟೆ ಪ್ರಕಾರ ಈ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಕಾಳುಮೆಣಸು ದರ
ಕಾಳುಮೆಣಸಿನ ಬೆಲೆಯಲ್ಲೂ ಯಾವುದೇ ಹೆಚ್ಚು-ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ಯಥಾಸ್ಥಿತಿಯಲ್ಲಿದೆ. ಕಾಳುಮೆಣಸಿಗೆ ನಿನ್ನೆ ಗರಿಷ್ಠ 680 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇದೇ ಬೆಲೆಯಿದೆ. ಇಂದು ಕೂಡಾ ಅದೇ ದರ ಮುಂದುವರಿದಿದೆ. ಇನ್ನು, ಒಣಕೊಬ್ಬರಿ ಬೆಲೆ ನಿನ್ನೆ ಗರಿಷ್ಠ 150 ರೂ.ಗಳಷ್ಟಿತ್ತು. ಈಗ 10 ರೂ. ಏರಿಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಶೀ ವಿಶ್ವನಾಥನ ಸನ್ನಿಧಿಯಲ್ಲಿ ಕರ್ನಾಟಕದ ಮಹಿಳೆಗೆ ಮೋಸ ಮಾಡಿದ ನಕಲಿ ಪೂಜಾರಿ: ಪೊಲೀಸರು ಸ್ಥಳದಲ್ಲೇ ಮಾಡಿದ್ದೇನು Video

ಮೋದಿಯವರು ಜೆನ್ ಜಿ ಕ್ಷಮೆ ಕೇಳೋದಾ, ಅರೆಕ್ಷಣ ನಾನೇ ಕೆನ್ನೆ ಬಡ್ಕೊಂಡೆ: ಅನಂತನಾಗ್ ಹೇಳಿಕೆ ವೈರಲ್ Video

ಪತ್ನಿಯನ್ನು ಕೊಂದೇ ಬಿಡ್ತೇನೆ ಎಂದು ಅತ್ತೆ ಮನೆಗೆ ಗನ್ ಹಿಡ್ಕೊಂಡು ಬಂದ ಅಳಿಯ ಸೆಕೆಂಡಲ್ಲಿ ಥಂಡಾ ಹೊಡೆದಿದ್ಯಾಕೆ Video

ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಗೆ ಹೃದಯಾಘಾತ, ಸಮಯಕ್ಕೆ ಸರಿಯಾಗಿ ಬರದ ಆಂಬ್ಯುಲೆನ್ಸ್: ಮುಂದೇನಾಗಿದ್ದೇನು Video

ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆ: ಸಚಿವರ ಲಿಸ್ಟ್ ಇನ್ನೂ ಕೊಡದ ಹೈಕಮಾಂಡ್

ಮುಂದಿನ ಸುದ್ದಿ
Show comments