Publish Date: Thu, 28 Nov 2019 (19:21 IST)
Updated Date: Thu, 28 Nov 2019 (19:24 IST)
ಸಚಿವೆ ಶಶಿಕಲಾ ಜೊಲ್ಲೆ ಮಾಡಿರೋ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ ನಡೆಗೆ ಜನರು ಖುಷ್ ಆಗಿದ್ದಾರೆ.
ನಿಪ್ಪಾಣಿ - ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಪಿಯ್ಟ್ ಕಾರು - ಟಿಪ್ಪರ್ ಹಿಂಬದಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳಿಂದ ನರಳಾಡುತಿದ್ದ ಪ್ರಯಾಣಿಕರಿಗೆ ಮಹಿಳಾ ಮಕ್ಕಳ ಸಚಿವೆ ಶಶಿಕಲಾ ಜೋಲ್ಲೆಯವರಿಂದ ಉಪಚಾರ ನಡೆದಿದೆ.
ಪ್ರಥಮ ಚಿಕಿತ್ಸೆ ನೀಡಿ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿದ್ದಾರೆ ಸಚಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಟೋಲ್ ನಾಕಾ ಬಳಿ ಈ ಘಟನೆ ನಡೆದಿದೆ.
ಕಾಗವಾಡ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸುವ ವೇಳೆಗೆ ಈ ದುರ್ಘಟನೆ ನಡೆದಿದ್ದು, ಅಪಘಾತಕ್ಕೆ ಒಳಗಾದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.