Publish Date: Sun, 16 Oct 2022 (07:42 IST)
Updated Date: Sun, 16 Oct 2022 (10:44 IST)
ಬೆಂಗಳೂರು : ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ವಿಚಾರ ಕಾನೂನು ರೀತಿಯೇ ತೀರ್ಮಾನ ಆಗಲಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಠದ ಭಕ್ತರು, ಮಾಜಿ ಶಾಸಕರ ನಿಯೋಗ ನನ್ನನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಆಡಳಿತ ವಿಚಾರದಲ್ಲಿ ಆಗ್ತಿರೋ ಸಮಸ್ಯೆಗಳನ್ನ ಪ್ರಸ್ತಾಪ ಮಾಡಿದ್ದಾರೆ. ಮಠದ ಸಂಪೂರ್ಣ ವಿಚಾರಗಳ ಬಗ್ಗೆ ನನಗೆ ಹೇಳಿದ್ದಾರೆ ಅಂತ ತಿಳಿಸಿದರು.