Select Your Language

Notifications

webdunia
webdunia
webdunia
webdunia

ಪದ್ಮಶ್ರೀ ಪ್ರಶಸ್ತಿಗಾಗಿ ಅರ್ಜಿ ಅಹ್ವಾನ

Padma Shri Award
ಬೆಂಗಳೂರು , ಮಂಗಳವಾರ, 3 ಜುಲೈ 2018 (18:04 IST)
2019ನೇ ಸಾಲಿನ ಶ್ರೇಣಿಯ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಆಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳ ಆಯ್ಕೆಗಾಗಿ ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ, ತಾಂತ್ರಿಕ, ತಂತ್ರಜ್ಞಾನ ಮತ್ತು ಇತರೆ ಗೌರವಾನ್ವಿತ ವೃತ್ತಿ ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ನಾಗರಿಕ ಸೇವೆ, ಕ್ರೀಡೆ, ಅಥ್ಲೇಟಿಕ್ಸ್, ಸಾಹಸ, ಕ್ರೀಡೆ, ಯೋಗ ಹಾಗೂ ಇತರೆ ಕ್ಷೇತ್ರಗಳು ಮಾನವ ಹಕ್ಕುಗಳ ಸಂರಕ್ಷಣೆ, ಭಾರತ ಸಂಸ್ಕøತಿಯ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ವನ್ಯಮೃಗ ಸಂರಕ್ಷಣೆ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಳಿಸಿಅಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 
 
ಮೇಲ್ಕಂಡ ವಿಷಯ ಹಾಗೂ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಜುಲೈ 5ರೊಳಗಾಗಿ ಇ-ಮೇಲ್ [email protected]  ವಿಳಾಸಕ್ಕೆ ಸಲ್ಲಿಸಿ ಅದರ ಸಾಫ್ಟ್ ಪ್ರತಿಯನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯದಲ್ಲಿ ಸಲ್ಲಿಸಬೇಕು.  

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಪ್ರಾರಂಭವಾಗಿ ತಿಂಗಳಾದ್ರೂ ವಿತರಣೆಯಾಗದ ಸಮವಸ್ತ್ರ