ಬೀದಿ ವ್ಯಾಪಾರಿಗಳ ಮನವಿಗೆ ವಿಷೇಶ ಆಯುಕ್ತರು ಸ್ಪಂದಿಸಿಲ್ಲ.ಹೀಗಾಗಿ ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ಹಾಗೂ ವ್ಯಾಪಾರದ ಪ್ರಮಾಣ ಪತ್ರದ ಮಾನ್ಯತೆಯ ಅವಧಿ ಮೀರುತ್ತಿರುವ ಬಗ್ಗೆ ಬಿ ಬಿ ಎಂ ಪಿ 2017 ರಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿತ್ತು .2018 ರಲ್ಲಿ ಸಮೀಕ್ಷೆಯಲ್ಲಿ ಗುರುತಿಸಿದ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗು ವ್ಯಾಪಾರ ಪ್ರಮಾಣ ಪತ್ರ ನೀಡಿದ್ದರು .ಗುರುತಿನ ಚೀಟಿ ಹಾಗೂ ವ್ಯಾಪಾರದ ಪುಮಾಣ ಪತ್ರ ಫೆಬ್ರವರಿ 4 2023 ರ ತನಕ ಮಾತ್ರ ಮಾನ್ಯತೆ ಇತ್ತು.ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ) ಕಾಯ್ದೆ ೨೦೧೪ ಹಾಗು ಅಧಿನಿಯ ಮದ ಪ್ರಕಾರ ಬಿ ಬಿ ಎಂ ಪಿ ಸಮೀಕ್ಷೆಯನ್ನು ಕೈಗೊಳ್ಳುವುದಾಗಿ ವಿಶೇಷ ಆಯುಕ್ತರು (ಕಲ್ಯಾಣ ) ತಿಳಿಸಿದ್ರು.
21/12/2023 ರಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಸಭೆಯನ್ನು ಸಹ ಕರೆದಿದ್ರು .ವಿಶೇಷ ಆಯುಕ್ತರು (ಕಲ್ಯಾಣ ) ಇವರುಗಳಿಗೆ ಎರಡು ಬಾರಿ ಮಾರಾಟ ಪುಮಾಣ ಪತ್ರ ನವೀಕರಿಸಲು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.ದಿನಾಂಕ 21ಹಾಗು 24ರಂದು ಮನವಿಗಳು ಸಲ್ಲಿಕೆ ಮಾಡಿದ್ದು,ಇಲ್ಲಿಯ ತನಕ ನಮ್ಮ ಮನವಿ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಹಾಗು ನಮಗೆ ಪ್ರತಿಕ್ರಿಯೆ ಸಹ ನೀಡಿಲ್ಲ.
ಬೀದಿ ವ್ಯಾಪಾರಿಗಳು ಬಡವರು ಬೀದಿ ವ್ಯಾಪಾರ ನಂಬಿಕೊಂಡು ಜೀವನ ಮಾಡುವವರು ನಮ್ಮ ಮಾರಾಟದ ಪ್ರಮಾಣ ಪಾತ್ರ ನವೀಕರಿಸದೆ ಇದ್ದಲ್ಲಿ ಬೀದಿಬದಿ ವ್ಯಾಪಾರಿಗಳನ್ನ ತೆರವುಗೊಳಿಸುತ್ತಾರೆಂಬ ಆತಂಕ ಎದುರಗಿದೆ.ಪೊಲೀಸ್ ಹಾಗೂ ಬಿ.ಬಿ.ಎಂ.ಪಿ. ಅಧಿಕಾರಿಗಳಿಂದ ಕಿರುಕುಳ ಆಗಬಹುದೆಂದು ಆತಂಕವಿದೆ ಎಂದ ಬೀದಿ ಬದಿ ವ್ಯಾಪಾರ ಸಂಘಟನೆಗಳು ಮತ್ತು ವ್ಯಾಪಾರಿಗಳು ತಮ್ಮ ಆಳಲು ತೋಡಿಕೊಂಡಿದ್ದಾರೆ.