Publish Date: Tue, 19 Dec 2023 (20:38 IST)
Updated Date: Tue, 19 Dec 2023 (20:43 IST)
ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ದೇಶದ ಸುರಕ್ಷತೆ, ಸಾರ್ವಜನಿಕ ಹಿತಾಸಕ್ತಿಗಾಗಿ ಯಾವುದೇ ಮೊಬೈಲ್ ನೆಟ್ವರ್ಕ್ ತಾತ್ಕಾಲಿಕವಾಗಿ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
ಇನ್ನು ಯಾವುದೇ ಕ್ಷಣದಲ್ಲೂ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸುವ,ಟೆಲಿಕಾಂ ಉತ್ಪನ್ನಗಳನ್ನು ನಿಷೇಧಿಸುವ ಸೇರಿದಂತೆ ಹಲವು ಬದಲಾವಣೆಗಳ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.