Publish Date: Tue, 19 Dec 2023 (17:22 IST)
Updated Date: Tue, 19 Dec 2023 (17:28 IST)
ಯಾರಲ್ಲಿ ಹುಲಿ ಉಗುರು ಇದೆಯೋ ಅವುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಹುಲಿ ಉಗುರು ಸೇರಿದಂತೆ ಅರಣ್ಯ ಜೀವಿ ವಸ್ತುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಹಾಗೂ ಕಾನೂನಾತ್ಮಕ ವಿಷಯಗಳ ಬಗ್ಗೆ ಎಜಿ ಶಶಿಕಿರಣ್ ಶೆಟ್ಟಿ ನೇತೃತ್ವದ ಅಧಿಕಾರಿಗಳ ಜೊತೆ ಚರ್ಚಿಸಿರುವ ಸಚಿವ ಈಶ್ವರ ಖಂಡ್ರೆ, ವನ್ಯಜೀವಿಗಳ ಅಂಗಾಂಗದ ವಸ್ತು ಮರಳಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ.