Select Your Language

Notifications

webdunia
webdunia
webdunia
webdunia

ಮಹಾ ವಂಚನೆಯ ಮತ್ತೊಂದು ಬೃಹತ್ ಹಗರಣ ಬಯಲು

ಮಹಾ ವಂಚನೆಯ ಮತ್ತೊಂದು ಬೃಹತ್ ಹಗರಣ ಬಯಲು
bangalore , ಶುಕ್ರವಾರ, 8 ಅಕ್ಟೋಬರ್ 2021 (21:07 IST)
2007-2010 ರ ನಡುವಿನ 03 ವರ್ಷಗಳ ಗುತ್ತಿಗೆ ಅವಧಿಯಲ್ಲಿನ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆಯಿಂದ ನೂರಾರು ಕೋಟಿ ವಾಪಸ್ಸು ಪಡೆಯುವ ಮಹಾ ಸಂಚು ರೂಪಿಸಿರುವ ದಿವಂಗತ ಗೋಪಿನಾಥ್ ರೆಡ್ಡಿ ಸಂಬಂಧಿಕರು ಮತ್ತು ಸಹವರ್ತಿಗಳ ನೇತೃತ್ವದ 25 ಮಂದಿ ಗುತ್ತಿಗೆದಾರರು.
25 ಮಂದಿ ಗುತ್ತಿಗೆದಾರರ ಪೈಕಿ 21 ಮಂದಿ (ದಿ|| ಗೋಪಿನಾಥ್ ರೆಡ್ಡಿ ಸೇರಿದಂತೆ) ಒಂದೇ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ.
ಇಡೀ ಬೆಂಗಳೂರು ಮಹಾನಗರದ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆಯನ್ನು ತಮ್ಮ ಕಪಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಒಂದೇ ಕುಟುಂಬದ 21 ಮಂದಿ ಸೇರಿದಂತೆ 41 ಮಂದಿ ಗುತ್ತಿಗೆದಾರರು.• 41 ಮಂದಿ ಗುತ್ತಿಗೆದಾರರು “ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು ಮತ್ತು ಗುತ್ತಿಗೆದಾರರ ಸಂಘ” ದ ಸದಸ್ಯರೂ ಸಹ ಆಗಿದ್ದಾರೆ.
01/04/2007 ರಿಂದ 31/03/2010 ರವರೆಗೆ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆಯನ್ನು ಈ 41 ಮಂದಿ ಗುತ್ತಿಗೆದಾರರಿಗೆ ನೀಡಲಾಗಿತ್ತು.
31/03/2010 ರಂದು ಸದರಿ ಗುತ್ತಿಗೆದಾರರಿಗೆ ಸಂಬಂಧಿಸಿದ ಗುತ್ತಿಗೆ ಅವಧಿಯು ಪೂರ್ಣಗೊಂಡ ನಂತರ ಪಾಲಿಕೆಯ SWM ಇಲಾಖೆಯ ಅಧಿಕಾರಿಗಳು ಹತ್ತಾರು ಬಾರಿ “ಹೊಸ ಗುತ್ತಿಗೆ” ನೀಡುವ ಸಂಬಂಧ ಟೆಂಡರ್ ಗಳನ್ನು ಆಹ್ವಾನಿಸುವುದು - ಹಳೆಯ ಗುತ್ತಿಗೆದಾರರು ಈ ಟೆಂಡರ್ ಪ್ರಕ್ರಿಯೆಗಳಿಗೆ ನ್ಯಾಯಾಲಯಗಳಿಂದ “ತಡೆಯಾಜ್ಞೆ” ತರುವುದು - ಇಂತಹ “ಕಣ್ಣಾ ಮುಚ್ಚಾಲೆ ಆಟ” ನಿರಂತರವಾಗಿ ಐದಾರು ವರ್ಷಗಳ ಕಾಲ ಯಾವುದೇ ಎಗ್ಗಿಲ್ಲದೇ ನಡೆಯುತ್ತಲೇ ಇತ್ತು
ಕಳೆದ 24 ವರ್ಷಗಳಿಂದ ನಿರಂತರವಾಗಿ ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿರುವ ಗೋಪಿನಾಥ್ ರೆಡ್ಡಿ ನೇತೃತ್ವದ 41 ಮಂದಿ ಗುತ್ತಿಗೆದಾರರು.
ಜೊತೆಗೆ ಪಾಲಿಕೆಗೆ ಪ್ರತಿ ವರ್ಷ ಸಂಗ್ರಹವಾಗುವ “ಆಸ್ತಿ ತೆರಿಗೆ” ಬಹು ಪಾಲನ್ನು ಕೇವಲ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆ ಕಾರ್ಯಕ್ಕೆ ಮಾತ್ರವೇ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿಯ ಷಡ್ಯಂತ್ರವನ್ನು ಅತ್ಯಂತ ಯಶಸ್ವಿಯಾಗಿ ಸೃಷ್ಟಿಸಿದ್ದ ಗೋಪಿನಾಥ್ ರೆಡ್ಡಿ ನೇತೃತ್ವದ ಗುತ್ತಿಗೆದಾರರು
01/04/2007 ರಿಂದ 31/03/2010 ರ ಮೂರು ವರ್ಷಗಳ ಗುತ್ತಿಗೆ ಅವಧಿಯ ಕಾರ್ಯಗಳಿಗೆ ಸಂಬಂಧಿಸಿದಂತೆ ಪಾಲಿಕೆಯು ತಮಗೆ ಒಟ್ಟು ₹. 232,64,62,421/- (ಇನ್ನೂರಾ ಮೂವತ್ತೆರಡು ಕೋಟಿ ಅರವತ್ತ ನಾಲ್ಕು ಲಕ್ಷದ ಅರವತ್ತೆರಡು ಸಾವಿರದ ನಾಲ್ಕು ನೂರಾ ಇಪ್ಪತ್ತೊಂದು) ಗಳನ್ನು ವಾಪಸ್ಸು ನೀಡಬೇಕಿದೆ ಎಂದು 25 ಮಂದಿ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಪಾಲಿಕೆಯು ತಮಗೆ ನೀಡಬೇಕಿರುವ -
a) Escalation Charges (ಏರಿಕೆ ಶುಲ್ಕ)
b) GPS (Deduction) Charges
c) Lead Charges (ಹೆಚ್ಚು ದೂರ ಕ್ರಮಿಸಿದ ಶುಲ್ಕ)
d) VDA (Variable Dearness Allowance ಅಥವಾ ಕಾರ್ಮಿಕರ ತುಟ್ಟಿ ಭತ್ಯೆ)
e) Termination Compensation (ಸೇವೆ ಮುಕ್ತಾಯದ ಪರಿಹಾರ)
f) Weighment Charges
g) Bata Charges
ಗಳ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ 25 ಮಂದಿ ಗುತ್ತಿಗೆದಾರರು.
ನ್ಯಾಯಾಲಯದ ಆದೇಶದಂತೆ ಇದೇ 25 ಮಂದಿ ಗುತ್ತಿಗೆದಾರರು ಸದರಿ ಪ್ರಕರಣದ ಮಧ್ಯಸ್ಥಿಕೆ ವಹಿಸಬೇಕೆಂದು ಉಚ್ಛ ನ್ಯಾಯಾಲಯದ “Arbitration Tribunal” (ಮಧ್ಯಸ್ಥಿಕೆ ನ್ಯಾಯ ಮಂಡಳಿ) ಮುಂದೆ 2016 ರಲ್ಲಿ ಅರ್ಜಿ ಸಲ್ಲಿಸಿದ್ದರು.
Garbage Mafia ದೊಂದಿಗೆ ಷಾಮೀಲಾಗಿರುವ ಪಾಲಿಕೆಯ ಹಿರಿಯ ಅಧಿಕಾರಿಗಳು ವಂಚಕ ಗುತ್ತಿಗೆದಾರರು “Arbitration Tribunal” ಮುಂದೆ ಸಲ್ಲಿಸಿದ್ದ ಅರ್ಜಿಯಲ್ಲಿ - ಪಾಲಿಕೆಯು ತಮಗೆ ಯಾವೆಲ್ಲ ವಿಷಯಗಳಿಗಾಗಿ 233 ಕೋಟಿ ರೂ. ಗಳಷ್ಟು ಬೃಹತ್ ಮೊತ್ತ ಪಾವತಿಸಬೇಕೆಂದು ಮನವಿ ಸಲ್ಲಿಸಿದ್ದರೋ, ಅಂತಹ ವಿಷಯಗಳಿಗೆ ಸಂಬಂಧಿಸಿದ ಸತ್ಯವಾದ ಅಂಕಿ - ಅಂಶಗಳನ್ನು, ಮಾಹಿತಿಗಳನ್ನು ದಾಖಲೆಗಳ ಸಹಿತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಒಂದು ಸಣ್ಣ ಪ್ರಯತ್ನವನ್ನೂ ಸಹ ಮಾಡಲೇ ಇಲ್ಲವೆಂಬುದು ನಿಜಕ್ಕೂ ದುರಂತ.
ವಂಚಕ ಗುತ್ತಿಗೆದಾರರ ಹಲವು ಬೇಡಿಕೆಗಳ ಪೈಕಿ ಅಧಿಕಾರಿಗಳು ನ್ಯಾಯಾಲಯಕ್ಕೆ ದಾಖಲೆಗಳ ಸಹಿತ ಮನವರಿಕೆ ಮಾಡಬೇಕಿದ್ದ ಸತ್ಯವಾದ ಅಂಕಿ - ಅಂಶಗಳೆಂದರೆ, Lead Charges ನಿಜಕ್ಕೂ ಕೊಡಲೇಬೇಕಿಲ್ಲ.
ಏಕೆಂದರೆ, ಈ ಗುತ್ತಿಗೆದಾರರು 2007 ರಿಂದ 2010 ರ ಅವಧಿಯಲ್ಲಿ ತಾವು ಸಂಗ್ರಹಿಸಿ - ಸಾಗಿಸಿದ್ದ ತ್ಯಾಜ್ಯಗಳನ್ನು ನಿಗದಿತ ಸ್ಥಳಕ್ಕಿಂತಲೂ ದೂರದ ಪ್ರದೇಶದಲ್ಲಿ Dump ಮಾಡಿರುವುದಕ್ಕೆ ಸಾಕ್ಷ್ಯಗಳು ಇಲ್ಲವೇ ಇಲ್ಲ.
2007 ರಲ್ಲಿ ತ್ಯಾಜ್ಯ ವಿಂಗಡಣೆ (Segregation) ನಿಯಮಗಳು ಜಾರಿಯಲ್ಲಿ ಇರಲಿಲ್ಲವಾದ್ದರಿಂದ ಮಿಶ್ರ ತ್ಯಾಜ್ಯ (Mixed Waste) ಗಳನ್ನೇ ಸಾಗಿಸಲಾಗುತ್ತಿತ್ತು.
ಈ ಗುತ್ತಿಗೆದಾರರು ಮಿಶ್ರ ತ್ಯಾಜ್ಯಗಳನ್ನು (Plastic ಸೇರಿದಂತೆ) ಸುರಿದಿರುವ ಪ್ರದೇಶಗಳಲ್ಲಿನ ಭೂ ಭಾಗವು ಬೃಹತ್ ಮಟ್ಟದಲ್ಲಿ ಕಲುಷಿತವಾಗಿರುವುದಲ್ಲದೇ, ಆ ಪ್ರದೇಶಗಳ ಅಂತರ್ಜಲವು ಸಂಪೂರ್ಣವಾಗಿ ಕಲುಷಿತಗೊಂಡಿದೆ.
“ಮಾಲಿನ್ಯ ನಿಯಂತ್ರಣ ಮಂಡಳಿ” ಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವುದರಿಂದ ಮತ್ತು ಮಂಡಳಿಯಿಂದ ಕಡ್ಡಾಯವಾಗಿ ಪಡೆಯಲೇಬೇಕಿರುವ “ನಿರಾಕ್ಷೇಪಣಾ ಪತ್ರ” ಗಳನ್ನೂ ಸಹ ಪಡೆದಿರುವುದಿಲ್ಲ.
ಮಿಶ್ರ ತ್ಯಾಜ್ಯಗಳನ್ನು (Plastic ಸೇರಿದಂತೆ) ಸುರಿದಿರುವ “ಭೂ ಭರ್ತಿ ಕೇಂದ್ರ”ದ ಸುತ್ತಮುತ್ತಲೂ ಐದಾರು ಕಿ. ಮೀ. ವ್ಯಾಪ್ತಿಯ ಭೂ ಪ್ರದೇಶವನ್ನು / ಅಂತರ್ಜಲವನ್ನು ಸಂಪೂರ್ಣ ಕಲುಷಿತಗೊಳಿಸಿರುವುದರಿಂದ ಈ ಎಲ್ಲಾ ಗುತ್ತಿಗೆದಾರರ ವಿರುದ್ಧ ಹಾಗೂ ಇವರಿಗೆ ಬೆಂಬಲವಾಗಿ ನಿಂತ ಎಲ್ಲಾ ಭ್ರಷ್ಟ ಅಧಿಕಾರಿಗಳ ವಿರುದ್ಧ PCB ನಿಯಮಾವಳಿಗಳನ್ವಯ Criminal ಪ್ರಕರಣಗಳನ್ನು ದಾಖಲಿಸಬೇಕಿರುತ್ತದೆ.
Lead Charges ಅನ್ನು Claim ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳ ಧೃಢೀಕರಣ ಪತ್ರ ಲಗತ್ತಿಸಿರಬೇಕೆಂಬ ನಿಯಮವನ್ನು ಪಾಲಿಸಿಯೇ ಇಲ್ಲ
ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು - “ತ್ಯಾಜ್ಯ ಸುರಿದಿರುವ ಪ್ರದೇಶಗಳ ತಪಾಸಣಾ ವರದಿ” ಗಳನ್ನು ಸಲ್ಲಿಸಿಯೇ  ಇಲ್ಲ.
VDA ಅನ್ನು ಹಲವು ಬಾರಿ ಗುತ್ತಿಗೆದಾರರಿಗೆ ವರ್ಗಾಯಿಸಿ, ನಿಜವಾದ ಫಲಾನುಭವಿಗಳಾದ ಕಾರ್ಮಿಕರಿಗೆ / ನೌಕರರಿಗೆ ದೊಡ್ಡ ಮಟ್ಟದ ಅನ್ಯಾಯವನ್ನೆಸಗಲಾಗಿದೆ.
VDA:- Variable Dearness Allowance ಎಂಬುದು ಆಯಾ ಇಲಾಖೆಯ ಕಾರ್ಮಿಕರಿಗೆ ನೀಡುವ ಒಂದು ಭತ್ಯೆ.
VDA ಅನ್ನು ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಕಾರ್ಯ ಮಾಡಿರುವ ಕಾರ್ಮಿಕರು / ನೌಕರರಿಗೆ ನೀಡಿರುವ Pay Vouchers ಗಳು ಮತ್ತು ಆಯಾ ಕಾರ್ಮಿಕರ / ನೌಕರರ Bank Statement ಗಳ ಜೊತೆಗೆ ಆಯಾ ಕಾರ್ಮಿಕರ / ನೌಕರರ Bank Pass Book ಗಳ ಪ್ರತಿಯನ್ನು ಒದಗಿಸಿದ್ದರೆ ಮಾತ್ರವೇ, ಅಂತಹ ತುಟ್ಟಿ ಭತ್ಯೆಗಳನ್ನು Labour Act ಅನ್ವಯ ನೇರವಾಗಿ ಸಂಬಂಧಿತ ಕಾರ್ಮಿಕರಿಗೆ / ನೌಕರರಿಗೆ ವರ್ಗಾಯಿಸಬಹುದಾಗಿರುತ್ತದೆ.
ಆದರೆ, ಈ ನಿಯಮಗಳನ್ನು ಮೀರಿ ಪಾಲಿಕೆಯು VDA ಅನ್ನು ಹಲವು ಬಾರಿ ಗುತ್ತಿಗೆದಾರರಿಗೆ ವರ್ಗಾಯಿಸಿದೆ.
ವಂಚಕ ಗುತ್ತಿಗೆದಾರರು Claim ಮಾಡಿರುವಂತೆ “ಸೇವೆ ಮುಕ್ತಾಯದ ಪರಿಹಾರ” (Termination Compensation) ವನ್ನು ನೀಡಲು ಅವಕಾಶವೇ ಇರುವುದಿಲ್ಲ.
ಏಕೆಂದರೆ, ಈ ಗುತ್ತಿಗೆದಾರರಿಗೆ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆಯ “ಕಾರ್ಯಾದೇಶ ಪತ್ರ” ಗಳನ್ನು ನೀಡಿದ್ದುದು 01/04/2007 ರಿಂದ 31/03/2010 ರ ಮೂರು ವರ್ಷಗಳಿಗೆ ಮಾತ್ರವೇ.
ಈ “ಕಾರ್ಯಾದೇಶ ಪತ್ರ” ಗಳಿಗೆ 01/04/2010 ರಿಂದ ನಯಾ ಪೈಸೆಯ ಬೆಲೆಯೇ ಇಲ್ಲ.
ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಸತ್ಯಾಂಶಗಳಿಂದ ಕೂಡಿದ ಅಂಕಿ - ಅಂಶಗಳನ್ನಾಗಲೀ / ಮಾಹಿತಿಗಳನ್ನಾಗಲೀ ನುರಿತ ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತರುವ ಒಂದು ಸಣ್ಣ ಪ್ರಯತ್ನವನ್ನೂ ಸಹ ಮಾಡದಿರುವ ಪಾಲಿಕೆಯ ಆಯುಕ್ತರು ಮತ್ತು SWM ಇಲಾಖೆಯ ಹಿರಿಯ ಅಧಿಕಾರಿಗಳು ವಂಚಕ ಗುತ್ತಿಗೆದಾರರ ಲೂಟಿ ಕಾರ್ಯಕ್ಕೆ ಬೆಂಬಲ ನೀಡುವ ಕಾನೂನು ಬಾಹಿರ ಕಾರ್ಯದಲ್ಲಿ ಕೈಜೋಡಿಸಿರುವುದು ಅತ್ಯಂತ ಸ್ಪಷ್ಟವಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ Arbitration Tribunal ನ Arbitrator (ಮಧ್ಯಸ್ಥಿಕೆ ತೀರ್ಪುದಾರರು) ಆಗಿದ್ದ ನಿವೃತ್ತ ನ್ಯಾಯಾಧೀಶರಾದ ಶ್ರೀ. ಚಂದ್ರಶೇಖರ್ ಅವರು ಅರ್ಜಿದಾರರ ಬಹುತೇಕ ಮನವಿಗಳನ್ನು ತಿರಸ್ಕರಿಸಿದ್ದರು.
ಅಲ್ಲದೇ, ಗುತ್ತಿಗೆದಾರರಿಗೆ ಕೇವಲ Escalation Charges of 5% ಮತ್ತು GPS (Deduction) Charges ಗಳನ್ನು ಮಾತ್ರ ನೀಡುವಂತೆ ತೀರ್ಪು ನೀಡಿ - 25 ಮಂದಿ ಗುತ್ತಿಗೆದಾರರಿಗೆ ಒಟ್ಟು ₹. 39,72,94,202/- (ಮೂವತ್ತೊಂಬತ್ತು ಕೋಟಿ ಎಪ್ಪತ್ತೆರಡು ಲಕ್ಷ ತೊಂಬತ್ತು ನಾಲ್ಕು ಸಾವಿರದ ಇನ್ನೂರಾ ಎರಡು) ಗಳನ್ನು ಪಾವತಿಸುವಂತೆ 07/03/2017 ರಂದು ಆದೇಶಿಸಿದ್ದರು.
ಇದೇ ಗುತ್ತಿಗೆದಾರರು ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಪಾಲಿಕೆಗೆ ಮಾಡುತ್ತಿದ್ದ / ಮಾಡಿದ್ದ ನೂರಾರು ಕೋಟಿ ರೂಪಾಯಿಗಳ ಮಹಾ ವಂಚನೆಯ ಬಗ್ಗೆ ತನಿಖಾ ವರದಿ ಸಲ್ಲಿಸುವಂತೆ 2008 ರಲ್ಲಿ ಅಂದಿನ ಮುಖ್ಯಮಂತ್ರಿಗಳು ಆದೇಶಿಸಿದ್ದರು.
ಅಂದಿನ ಮುಖ್ಯಮಂತ್ರಿಗಳ ಆದೇಶದಂತೆ ಸಮಗ್ರ ತನಿಖೆ ನಡೆಸಿದ್ದ BMTF ಅಧಿಕಾರಿಗಳು ಸಲ್ಲಿಸಿದ್ದ “ತನಿಖಾ ವರದಿ” ಯಲ್ಲಿ ಎಲ್ಲ 41 ಮಂದಿ ಗುತ್ತಿಗೆದಾರರನ್ನು “ಕಪ್ಪು ಪಟ್ಟಿ” ಗೆ ಸೇರಿಸುವಂತೆ ಶಿಫಾರಸ್ಸು ಮಾಡಲಾಗಿತ್ತು.
ಹಾಗೆಯೇ, ಸದರಿ ಗುತ್ತಿಗೆದಾರರಿಂದ ಹಿಂದಿನ 07 ವರ್ಷಗಳ ಅವಧಿಯಲ್ಲಿ ಅವರು ಪಾಲಿಕೆಗೆ ವಂಚಿಸಿದ್ದ ನೂರಾರು ಕೋಟಿ ರೂಪಾಯಿಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ ಬಡ್ಡಿ ಸಹಿತ ವಸೂಲು ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು.
ಆದರೆ, ಇಂತಹ ಗಂಭೀರವಾದ “ತನಿಖಾ ವರದಿ” ಯಲ್ಲಿನ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪಾಲಿಕೆಯ ಅಂದಿನ ಆಯುಕ್ತರು ಆತುರಾತುರವಾಗಿ ಅದೇ 25 ಮಂದಿ ಗುತ್ತಿಗೆದಾರರಿಗೆ ಹಿಂದೆ ಮುಂದೆ ಆಲೋಚಿಸದೆಯೇ, Arbitrator ಅವರ ಆದೇಶ ಬಂದ ತಕ್ಷಣವೇ ₹. 39,72,94,202/- ಗಳನ್ನು ಬಿಡುಗಡೆ ಮಾಡಿಸುವ ಮೂಲಕ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದರು.
Arbitrator - ಅಂದರೆ, ಮಧ್ಯಸ್ಥಿಕೆದಾರರು ನೀಡಿದ್ದ ತೀರ್ಪನ್ನು ಪಾಲಿಕೆಯು ಪಾಲಿಸಲೇಬೇಕೆಂಬ ನಿಯಮವೇನಿಲ್ಲ.
ಮಾನ್ಯ Arbitrator ಅವರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹತ್ತಾರು ಅವಕಾಶಗಳು ಪಾಲಿಕೆಯ ಅಧಿಕಾರಿಗಳಿಗಿತ್ತಾದರೂ ಸಹ ಮೇಲ್ಮನವಿ ಸಲ್ಲಿಸಿಯೇ ಇಲ್ಲ.
ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಯತ್ನವನ್ನೇ ಮಾಡದೇ - ಏಕಾಏಕಿ ₹. 39,72,94,202/- ಗಳಷ್ಟು ಸಾರ್ವಜನಿಕರ ತೆರಿಗೆಯ ಬೃಹತ್ ಮೊತ್ತವನ್ನು ವಂಚಕ ಗುತ್ತಿಗೆದಾರರಿಗೆ ಪಾವತಿಸಿರುವ ಆತುರಾತುರದ ನಡೆಯ ಹಿಂದೆ ಕೋಟ್ಯಾಂತರ ರೂಪಾಯಿಗಳ ಕಿಕ್ ಬ್ಯಾಕ್ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದೆ.
ಇದಾದ ನಂತರ ಗುತ್ತಿಗೆದಾರರು ತಾವು ಕೇಳಿದ್ದ ಒಟ್ಟು 233 ಕೋಟಿ ಮೊತ್ತದಲ್ಲಿ Arbitrator ಅವರ ಆದೇಶದಂತೆ ಬಿಡುಗಡೆಯಾಗಿದ್ದ ಮೊತ್ತವನ್ನು ಹೊರತುಪಡಿಸಿ, ಇನ್ನುಳಿದ ₹. 192,91,68,219/-  ಗಳನ್ನು ತಮಗೆ ಪಾವತಿಸುವಂತೆ ಪಾಲಿಕೆಗೆ ಆದೇಶಿಸಬೇಕೆಂದು Amicable Settlement (ಸೌಹಾರ್ದಯುತ ಒಪ್ಪಂದ) ಮಾಡಿಕೊಳ್ಳುವ ಬಗ್ಗೆ ಇದೇ Garbage Mafia ದಿಂದ ಪಾಲಿಕೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಸಂಬಂಧ ದಿಢೀರ್ ಆದೇಶ ತರಬೇಕೆಂಬ ಅತಿಯಾದ ಹುರುಪಿನಲ್ಲಿ ಇದೇ Mafia ದ ಸದಸ್ಯರಲ್ಲೊಬ್ಬರಾದ ಶ್ರೀನಿವಾಸ ರೆಡ್ಡಿ ಎಂಬ ಗುತ್ತಿಗೆದಾರರು “83ನೇ City Civil & Session Judge” ನ್ಯಾಯಾಲಯದ ಮುಂದೆ ಅರ್ಜಿ (Com. A.S. # 255/2018) ಯನ್ನು ಸಲ್ಲಿಸಿದ್ದರು.
ಆದರೆ, ಶ್ರೀನಿವಾಸ್ ರೆಡ್ಡಿ ಯವರ ಅರ್ಜಿಯಲ್ಲಿದ್ದ ಎಲ್ಲ ಮನವಿಗಳ ಸತ್ಯಾಸತ್ಯತೆ ಪರಿಶೀಲಿಸಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ದಿನಾಂಕ 18/03/2021 ರಂದು ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ನ್ಯಾಯಾಲಯದ ಈ ಆದೇಶದಿಂದ, ನೂರಾರು ಕೋಟಿ ಲೂಟಿ ಹೊಡೆಯುವ ವಂಚಕ ಗುತ್ತಿಗೆದಾರರ ದೊಡ್ಡ ಹುನ್ನಾರಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು.
ನಿಜಕ್ಕೂ ಶ್ರೀನಿವಾಸ ರೆಡ್ಡಿ ಎಂಬ ಗುತ್ತಿಗೆದಾರರ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸದೇ ಹೋಗಿದ್ದರೆ, ಇಷ್ಟೋತ್ತಿಗಾಗಲೇ ಉಳಿದ 193 ಕೋಟಿ ರೂ. ಗಳಷ್ಟು ಬೃಹತ್ ಮೊತ್ತ 25 ಮಂದಿ ವಂಚಕ ಗುತ್ತಿಗೆದಾರರ ಪಾಲಾಗುತ್ತಿತ್ತು ಎಂಬುದಂತೂ ಸತ್ಯ
ನ್ಯಾಯಾಲಯವು ಶ್ರೀನಿವಾಸ ರೆಡ್ಡಿಯವರ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಸಹಜವಾಗಿಯೇ ಆಯುಕ್ತರು ಮತ್ತು ಪಾಲಿಕೆಯ SWM ಇಲಾಖೆಯ ಅಧಿಕಾರಿಗಳು, ವಂಚಕ ಗುತ್ತಿಗೆದಾರರ ಮಹಾ ಲೂಟಿ ಕಾರ್ಯಕ್ಕೆ ಸಹಕಾರ ನೀಡಲು ಸಾಧ್ಯವಾಗುತ್ತಿಲ್ಲ.
ಆದರೂ, ಹೇಗಾದರೂ ಮಾಡಿ 193 ಕೋಟಿ ರೂ. ಗಳನ್ನು ಪಡೆದೇ ತೀರಬೇಕೆಂಬ ಇನ್ನಿಲ್ಲದ ಹಠಕ್ಕೆ ಬಿದ್ದಿರುವ ವಂಚಕ ಗುತ್ತಿಗೆದಾರರು ಹಲವು ವಾಮ ಮಾರ್ಗಗಳ ಮೂಲಕ ಹಣ ಪಡೆಯುವ ದೊಡ್ಡ ಹುನ್ನಾರಗಳನ್ನೇ ನಡೆಸಿದ್ದಾರೆ.
ಗುತ್ತಿಗೆದಾರರರೊಂದಿಗೆ ಪಾಲಿಕೆಯ SWM ಇಲಾಖೆಯ ಅಧಿಕಾರಿಗಳು ಷಾಮೀಲಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವರ್ಷಾನುಗಟ್ಟಲೆ ನಿರಂತರವಾಗಿ “ಸಾವಿರಾರು ಕೋಟಿ ರೂಪಾಯಿಗಳ ಮಹಾ ವಂಚನೆ ಕಾರ್ಯ” ನಡೆಸಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ - 2015 ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯವು WP # 24739/2012 ಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಎಲ್ಲ 198 ವಾರ್ಡ್ ಗಳ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆಗಳನ್ನು ರದ್ದು ಪಡಿಸುವಂತೆ ಆದೇಶಿಸಿತ್ತು.
ಅಲ್ಲದೇ, ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಕಾರ್ಯವನ್ನು “ಇಲಾಖೆಯ ವತಿ” ಯಿಂದಲೇ ನಿರ್ವಹಿಸುವುದಾಗಿ ಪಾಲಿಕೆಯು ನ್ಯಾಯಾಲಯದಲ್ಲಿ “ಪ್ರಮಾಣ ಪತ್ರ” ವನ್ನೂ ಸಹ ಸಲ್ಲಿಸಿತ್ತು.
ಆದರೆ, ಪಾಲಿಕೆಯ ಈ ತೀರ್ಮಾನವನ್ನೇ ತಮ್ಮ ಲೂಟಿ ಕಾರ್ಯಕ್ಕೆ “ಮಹಾ ಅಸ್ತ್ರ”ವನ್ನಾಗಿಸಿಕೊಂಡ ವಂಚಕ ಗುತ್ತಿಗೆದಾರರು “ಇಲಾಖೆ ವತಿ ಯಿಂದ ನಿರ್ವಹಣೆ” ಕಾರ್ಯದ ಹೆಸರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದರು.
2016 ರ ಫೆಬ್ರುವರಿ ತಿಂಗಳವರೆಗೆ ಪಾಲಿಕೆಯು ತನ್ನ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ವಾರ್ಷಿಕವಾಗಿ 385 ಕೋಟಿ ರೂ. ಗಳಷ್ಟು ಹಣವನ್ನು ವೆಚ್ಛ ಮಾಡುತ್ತಿದ್ದುದರ ಬದಲಾಗಿ, 2016 ರ ಮಾರ್ಚ್ ತಿಂಗಳಿನಿಂದ “ಇಲಾಖೆಯ ವತಿಯಿಂದ ನಿರ್ವಹಣೆ” ಎನ್ನುವ ಹೆಸರಿನಲ್ಲಿ ವಾರ್ಷಿಕವಾಗಿ ಸುಮಾರು 1,016 ಕೋಟಿ ರೂ. ಗಳಷ್ಟು ಬೃಹತ್ ಮೊತ್ತ ವೆಚ್ಛ ಮಾಡುವಂತ ಹೀನಾಯ ಪರಿಸ್ಥಿತಿಗೆ ಪಾಲಿಕೆಯನ್ನು ವಂಚಕ ಗುತ್ತಿಗೆದಾರರು ಮತ್ತು ಭ್ರಷ್ಟ ಅಧಿಕಾರಿಗಳು ತಂದಿಟ್ಟಿದ್ದರು.
2016 ಕ್ಕೂ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಗುತ್ತಿಗೆದಾರರಿಗೆ ಅವಕಾಶ ನೀಡಬಾರದೆಂದು ಉಚ್ಛ ನ್ಯಾಯಾಲಯವು ಅತ್ಯಂತ ಸ್ಪಷ್ಟವಾಗಿ ಆದೇಶಿಸಿತ್ತು.
ಆದರೂ ಸಹ, “ಅಳಿಯ ಅಲ್ಲ ಮಗಳ ಗಂಡ” ಎನ್ನುವ ಗಾದೆ ಮಾತಿನಂತೆ - ಪಾಲಿಕೆಯ ಭ್ರಷ್ಟ ಅಧಿಕಾರಿಗಳು (ಆಯುಕ್ತರೂ ಸೇರಿದಂತೆ) ಅದೇ ವಂಚಕ ಗುತ್ತಿಗೆದಾರರಿಗೆ ಬೇರೆ ಬೇರೆ ಹೆಸರುಗಳಲ್ಲಿ “ಪೂರೈಕೆದಾರರು” ಎಂದು ನಮೂದಿಸಿ “ಕಾರ್ಯಾದೇಶ ಪತ್ರ” ಗಳನ್ನು ನೀಡುವ ಮೂಲಕ “ಇಲಾಖೆಯ ವತಿಯಿಂದ ನಿರ್ವಹಣೆ” ಕಾರ್ಯಕ್ಕೆ ಹೊಸದಾದ ನಿಯಮಬಾಹಿರ ವೇದಿಕೆಯನ್ನು ಒದಗಿಸಿಕೊಟ್ಟಿದ್ದರು.
ವಂಚಕ ಗುತ್ತಿಗೆದಾರರು ತಮ್ಮ ತಮ್ಮ Agency ಗಳ ಹೆಸರುಗಳನ್ನು ನೆಪಮಾತ್ರಕ್ಕೆ ಬದಲಿಸಿ ಮಹಾ ಲೂಟಿ ಕಾರ್ಯಕ್ಕೆ ಇಳಿದು, ಪಾಲಿಕೆಯ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ 2016 ರ ಫೆಬ್ರುವರಿ ತಿಂಗಳವರೆಗೆ ಪಾಲಿಕೆಯು ತನ್ನ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆಂದು ವೆಚ್ಛ ಮಾಡುತ್ತಿದ್ದ ಒಟ್ಟು ಮೊತ್ತಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಮೊತ್ತವನ್ನು ವೆಚ್ಛ ಮಾಡುವ ದಾರುಣ ಪರಿಸ್ಥಿತಿಗೆ ಪಾಲಿಕೆಯನ್ನು ತಂದಿಟ್ಟಿದ್ದರು.
ಕಾನೂನಿನಲ್ಲಿರುವ ಲೋಪ ದೋಷಗಳನ್ನು ಹಲವಾರು ಬಾರಿ ದುರುಪಯೋಗಪಡಿಸಿಕೊಂಡಿರುವ ಇದೇ ವಂಚಕ ಗುತ್ತಿಗೆದಾರರು ಹೇಗಾದರೂ ಮಾಡಿ 193 ಕೋಟಿ ರೂಪಾಯಿಗಳನ್ನು ಪಾಲಿಕೆಯಿಂದ ಪಡೆಯಲೇಬೇಕೆಂದು ಹಲವಾರು ತಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ.
Garbage Mafia ದೊಂದಿಗೆ ಷಾಮೀಲಾಗಿ, ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ್ತು ವ್ಯಾಪಕ ಭ್ರಷ್ಟಾಚಾರದಲ್ಲಿ ಭಾಗಿಗಳಾಗಿ ಪಾಲಿಕೆಯ ಕೋಟ್ಯಾಂತರ ರೂಪಾಯಿಗಳನ್ನು ವಂಚಕ ಗುತ್ತಿಗೆದಾರರ ಪಾಲಾಗುವಂತೆ ಮಾಡಿರುವ ಪಾಲಿಕೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು / ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು / ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಲಾಗಿದೆ.
ಕಾನೂನಿನ ಲೋಪದೋಷಗಳನ್ನು ದುರುಪಯೋಗ ಪಡಿಸಿಕೊಂಡು ನಿರಂತರವಾಗಿ ಪಾಲಿಕೆಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿರುವ ಬೆಂಗಳೂರು ಸ್ವಚ್ಛತೆ ಮತ್ತು ಲಾರಿ ಮಾಲೀಕರು ಮತ್ತು ಗುತ್ತಿಗೆದಾರರ ಸಂಘದ ಎಲ್ಲ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಅವರೆಲ್ಲರನ್ನೂ BMTF ವರದಿಯ ಶಿಫಾರಸ್ಸಿನಂತೆ “ಕಪ್ಪು ಪಟ್ಟಿ” ಗೆ ಸೇರಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು / ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು / ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಲಾಗಿದೆ.
ಈ ಬೃಹತ್ ವಂಚನೆಯ ಹಗರಣದ ತನಿಖೆಯನ್ನು CID ಗೆ ವಹಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಆಗ್ರಹಿಸಲಾಗಿದೆ.
ಹಾಗೆಯೇ, ಈ ಬೃಹತ್ ವಂಚನೆಯ ಹಗರಣದ ತನಿಖೆಯನ್ನು CID ಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್.
ಈ ಮಹಾ ವಂಚನೆಯ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ, ACB ಮತ್ತು BMTF ನಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಮತ್ತು ಸಾರ್ವಜನಿಕ ತೆರಿಗೆ ಹಣ ಲೂಟಿಗೆ ಸಹಕಾರ ನೀಡಿದ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ದೂರುಗಳು ದಾಖಲು.
bbmp

Share this Story:

Follow Webdunia kannada

ಮುಂದಿನ ಸುದ್ದಿ

ಟಾಟಾ ಸಂಸ್ಥೆಯ ಪಾಲಾದ ಏರ್ ಇಂಡಿಯಾ