Select Your Language

Notifications

webdunia
webdunia
webdunia
webdunia

ಟಾಟಾ ಸಂಸ್ಥೆಯ ಪಾಲಾದ ಏರ್ ಇಂಡಿಯಾ

ಟಾಟಾ ಸಂಸ್ಥೆಯ ಪಾಲಾದ ಏರ್ ಇಂಡಿಯಾ
bangalore , ಶುಕ್ರವಾರ, 8 ಅಕ್ಟೋಬರ್ 2021 (21:00 IST)
ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಕಂಪನಿಯು ಕೊನೆಗೂ ಟಾಟಾ ಸನ್ಸ್​ ಕಂಪನಿಯ ಪಾಲಾಗಿದೆ.
ಬಂಡವಾಳ ಹಿಂಪಡೆತ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾಟಾ ಸನ್ಸ್​ ಕಂಪನಿಯು ಏರ್​ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಟೆಂಡರ್​ ಒಪ್ಪಿಗೆಯಾಗಿರುವುದನ್ನು ಘೋಷಿಸಿದರು.ಬಂಡವಾಳ ಹಿಂಪಡೆತ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಕಂಪನಿಯೊಂದು ಏರ್​ಇಂಡಿಯಾ ಖರೀದಿಗೆ ಟೆಂಡರ್​ ಬಿಡ್ ಸಲ್ಲಿಸಿದ ನಂತರ, ಸರ್ಕಾರ ಅದನ್ನು ಒಪ್ಪಿಕೊಂಡ ನಂತರದಲ್ಲಿ ಯಾವುದೇ3 ಚರ್ಚೆಗೆ ಅವಕಾಶ ಇರುವುದಿಲ್ಲ. ಈ ಕುರಿತು ವಿವಿಧ ಇಲಾಖೆಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳು ಒಂದು ನಿರ್ಣಯಕ್ಕೆ ಬಂದಿದ್ದಾರೆ.
ಟಾಟಾ ಸನ್ಸ್​ ಪ್ರೈವೇಟ್ ಲಿಮಿಟೆಡ್​ 18,718 ಕೋಟಿ ಮೊತ್ತಕ್ಕೆ ಬಿಡ್ ಪಡೆದು ಏರ್ ಇಂಡಿಯ ಸೇರಿದೆ.ಏರ್​ ಇಂಡಿಯಾ ಕಂಪನಿಯ ಬಿಡಿಂಗ್​ನಲ್ಲಿ ಟಾಟಾ ಸನ್ಸ್​ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು.ಸರ್ಕಾರ ಬಿಡ್ ಗೆ ಆಹ್ವಾನಿಸಿದಾಗ ಏಳು ಸಂಸ್ತೆಗಳು ಡಿಸೆಂಬರ್ 2020 ರೊಳಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಐವರು ಅರ್ಹತೆಯ ಅವಶ್ಯಕತೆಗಳನ್ನು ಪೂರೈಸದ ಕಾರಣ ಅನರ್ಹಗೊಂಡಿದ್ದಾರೆ.
ಎಂದು ಮಾಹಿತಿ ನೀಡಿದರು.
ಭಾರತ ಸರ್ಕಾರವು ತನ್ನ ಅಧೀನದಲ್ಲಿರುವ ಏರ್​ ಇಂಡಿಯಾದ ಶೇ 100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಒಪ್ಪಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ ಮುಷ್ಕರದ ವೇಳೆ 2000 ಕ್ಕಿಂತ ಹೆಚ್ಚು ಕಾರ್ಮಿಕರನ್ನ ಸೇಡಿನಿಂದ ವಜಾ