Publish Date: Sun, 17 Oct 2021 (22:43 IST)
Updated Date: Sun, 17 Oct 2021 (22:48 IST)
ಬೆಂಗಳೂರು: ಭಾರಿ ಮಳೆಗೆ ನಗರದಲ್ಲಿ ಮತ್ತೊಂದು ಮನೆ ಕುಸಿದಿದೆ.
ಸುಮಾರು 80 ವರ್ಷದ ಹಿಂದೆ ನಿರ್ಮಾಣವಾದ ಮನೆಯೊಂದು ರಾಜಾಜಿನಗರದ ಆರ್.ಜಿ.ಐ ಕಾಲೋನಿಯ ವಾರ್ಡ್ ನಂ. 97 ದಯಾನಂದನಗರದಲ್ಲಿ ಕುಸಿದು ನೆಲಕ್ಕೆ ಉರುಳಿದೆ.
ಮೊನ್ನೆ ರಾತ್ರಿ 9ರ ಸುಮಾರಿಗೆ ಮನೆ ಒಂದು ಭಾಗ ಉರುಳಿಬಿದ್ದಿದೆ. ಅಕ್ಕಪಕ್ಕದಲೇ ಇರುವ ಎರಡು ಎಂಚಿನ ಮನೆಯ ಗೋಡೆ ಕುಸಿದಿದೆ. ಕುಸಿದ ಮನೆಯಲ್ಲಿ 7 ಜನರು ವಾಸವಾಗಿದ್ದರು. ಆದರೆ ಮನೆ ಕುಸಿದು ಕುಟುಂಬ ಬೀದಿಗೆ ಬಿದ್ದಿದೆ.
ಪತ್ನಿ ಮನೆ ಕೆಲಸ, ಗಂಡ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 7 ಸದಸ್ಯರ ಕುಟುಂಬ ಮನೆ ಇಲ್ಲದೆ ಬಿದ್ದಿಯಲ್ಲೇ ಜೀವನ ಸಾಗಿಸುವಂತಾಗಿದೆ. ಊಟ, ನಿದ್ರೆಯಿಲ್ಲದೆ ಬೀದಿಯಲ್ಲೇ ಪರದಾಡುತ್ತಿದ್ದಾರೆ.