Daily Horoscope

Select Your Language

Notifications

webdunia
webdunia
webdunia
webdunia

ಜನಸಂಖ್ಯೆ ಕುಸಿತ ತಡೆಯಲು ಮೂರನೇ, ನಾಲ್ಕನೇ ಮಗು ಪ್ರೋತ್ಸಾಹ ಧನ ಘೋಷಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

chandrababu naidu
ವಿಜಯವಾಡ: ರಾಜ್ಯದಲ್ಲಿ ಜನಸಂಖ್ಯೆ ಕುಸಿತವನ್ನು ತಡೆಯುವ ಪ್ರಯತ್ನದ ಭಾಗವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಮೂರನೇ ಮಗುವಿಗೆ 30,000 ಮತ್ತು ನಾಲ್ಕನೇ ಮಗುವಿಗೆ 40,000 ರೂಪಾಯಿಗಳ ಆರ್ಥಿಕ ಪ್ರೋತ್ಸಾಹವನ್ನು ಘೋಷಿಸಿದರು. 

ಮೂರನೇ ಮಗು ಜನಿಸಿದ ತಕ್ಷಣ 30,000 ಮತ್ತು ನಾಲ್ಕನೇ ಮಗುವಿಗೆ 40,000 ನೀಡುತ್ತೇವೆ. ಸ್ವರ್ಣಆಂಧ್ರ–ಸ್ವಚ್ಛಾಂಧ್ರ ಸ್ವಚ್ಛತಾ ಕಾರ್ಯಕ್ರಮದ ನೇಪಥ್ಯದಲ್ಲಿ ನಾಯ್ಡು ಮಾತನಾಡಿ, ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪ್ರತಿಪಾದಿಸಿದ್ದರೂ, ಜನನ ಪ್ರಮಾಣ ಹೆಚ್ಚಿಸಲು ಸಮಾಜ ಒಟ್ಟಾಗಿ ಶ್ರಮಿಸುವ ಸಮಯ ಬಂದಿದೆ ಎಂದು ಮುಖ್ಯಮಂತ್ರಿ ಹೇಳಿದರು. ಎರಡನೇ ಮಗುವನ್ನು ಹೊಂದಿರುವ ದಂಪತಿಗಳಿಗೆ 25,000  ಘೋಷಣೆ ಮಾಡಿದರು.

ನಾಯ್ಡು ಅವರ ಪ್ರಕಾರ, ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪ್ರವೃತ್ತಿಗಳು ಕುಟುಂಬದ ಗಾತ್ರದ ಮೇಲೆ ಪ್ರಭಾವ ಬೀರುತ್ತಿವೆ, ಕೆಲವು ದಂಪತಿಗಳು ಆದಾಯ ಹೆಚ್ಚಾದಂತೆ ಒಂದೇ ಮಗುವನ್ನು ಆರಿಸಿಕೊಳ್ಳುತ್ತಾರೆ, ಆದರೆ ಇತರರು ತಮ್ಮ ಚೊಚ್ಚಲ ಮಗು ಗಂಡು ಅಲ್ಲದಿದ್ದಲ್ಲಿ ಮಾತ್ರ ಎರಡನೇ ಮಗುವನ್ನು ಆಯ್ಕೆ ಮಾಡುತ್ತಾರೆ. 
ಇದು ಜನಸಂಖ್ಯೆಯ ಬೆಳವಣಿಗೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ವಿಜಯ್‌ ನಿರ್ವಹಿಸಲಿರುವ ಖಾತೆಗಳು ಯಾವುದೆಲ್ಲ ಗೊತ್ತಾ