Select Your Language

Notifications

webdunia
webdunia
webdunia
webdunia

ಅನಧಿಕೃತವಾಗಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ನೀಲಣ್ಣವರ ಅರೆಸ್ಟ್‌

shivananda neelannavar arrest
Photo Credit X
ಬೆಳಗಾವಿ: ಶುಕ್ರವಾರ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದ ಇಲ್ಲಿನ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು ಬಂಧಿಸಲಾಗಿದೆ.

₹50 ಕೋಟಿಗೂ ಹೆಚ್ಚಿನ ಅವ್ಯವಹಾರ ಮೊದಲ ಹಂತದಲ್ಲೇ ಖಾತ್ರಿಯಾಗಿದೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು ತನಿಖೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಪ್ರತಿಕ್ರಿಯಿಸಿದ್ದಾರೆ.

ಕೈ ಸಾಲದ ಹೆಸರಿನಲ್ಲಿ ಆರೋಪಿ ಹಣ ಸಂಗ್ರಹಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲೂ ಇವರ ಅವ್ಯವಹಾರಗಳು ಪತ್ತೆಯಾಗಿವೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಈ ವ್ಯಕ್ತಿ ಯಾವ ಬ್ಯಾಂಕುಗಳ ಜತೆಗೆ ವ್ಯವಹಾರ ಮಾಡಿದ್ದಾರೋ ಅವರನ್ನೂ ತನಿಖೆಯಲ್ಲಿ ಪರಿಗಣಿಸಲಾಗುವುದು. ಇನ್ನಷ್ಟು ಆರೋಪಿಗಳು ಕೈ ಜೋಡಿಸಿದ್ದು, ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುತ್ತೇವೆ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ದೇಶ ಒಂದು ಚುನಾವಣೆ’ ಜಾರಿ- ಬಿಜೆಪಿ ಮನವಿ