ಹಬ್ಬಕ್ಕೆಂದು ಊರಿಗೆ ಬಂದವ ಸ್ನೇಹಿತನಿಂದಲೇ ಅಂದರ್!

Webdunia
ಸೋಮವಾರ, 5 ಸೆಪ್ಟಂಬರ್ 2022 (12:29 IST)
ಬಾಗಲಕೋಟೆ : ಹಬ್ಬದ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದ ಯುವಕನನ್ನು ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಮಲ್ಲಮ್ಮ ನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಮೆಹಬೂಬ್(22) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಮೆಹಬೂಬ್ ಅನ್ನು ಆತನ ಸ್ನೇಹಿತ ಭದ್ರೇಶ್ ಹತ್ಯೆಗೈದಿದ್ದಾನೆ. ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮೆಹಬೂಬ್, ಪ್ರತಿ ಹಬ್ಬದ ದಿನಗಳಲ್ಲಿ ರಜೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಊರಿಗೆ ಬರುತ್ತಿದ್ದನು.

ಹೀಗೆ ಬಂದ ಮೆಹಬೂಬ್ನನ್ನು ಸ್ನೇಹಿತ ಭದ್ರೇಶ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇತ್ತ ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬ ಆಗ್ರಹಿಸಿದೆ.

ಕಳೆದ 5 ವರ್ಷದ ಹಿಂದೆ ಭದ್ರೇಶ್ ಮತ್ತು ಮೆಹಬೂಬ್ ನಡುವೆ ಸಣ್ಣ ಜಗಳವಾಗಿತ್ತು. ಇದೇ ಸೇಡು ಇಟ್ಟಕೊಂಡಿದ್ದ ಭದ್ರೇಶ್, ಮೊನ್ನೆ ರಾತ್ರಿ ಅಂಗನವಾಡಿ ಬಳಿ ಸ್ನೇಹಿತರೊಟ್ಟಿಗೆ ಕೂತಿದ್ದ ಮಹಬೂಬ್ಗೆ ಎದೆ, ಕುತ್ತಿಗೆ, ಹೊಟ್ಟೆ ಸೇರಿ ಹಲವೆಡೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸೋದು ಸುಲಭ ಅಲ್ಲ, ಈ ಗುಟ್ಟು ಹೈಕಮಾಂಡ್ ಗೂ ಗೊತ್ತು

ಚಿಕ್ಕಮಗಳೂರಿನಲ್ಲಿ ಶಿಕ್ಷಕಿಯ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ: ಕಿರುಚಿಕೊಂಡಿದ್ದಕ್ಕೆ ದುರುಳರು ಮಾಡಿದ್ದೇನು

ಆರ್ ಎಸ್ಎಸ್ ಕ್ವಿಜ್ ಹಾಗಿರ್ಲಿ, ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿ: ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರ ಕ್ಲಾಸ್

Karnataka Weather: ಇಂದೂ ಇರಲಿದೆಯಾ ಸೈಕ್ಲೋನ್ ಮೊಂಥಾ ಇಫೆಕ್ಟ್, ಇಲ್ಲಿದೆ ಹವಾಮಾನ ವರದಿ

ಪ್ರೈವೆಸಿಗೆ ಅಡ್ಡಿಯಾಗುತ್ತಾಳೆಂದು ಮಗಳನ್ನು ಮುಗಿಸಿದ ಮಲತಂದೆ ಕೊನೆಗೂ ಅರೆಸ್ಟ್‌

ಮುಂದಿನ ಸುದ್ದಿ
Show comments