Select Your Language

Notifications

webdunia
webdunia
webdunia
webdunia

ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ ತಿಳಿಯಿರಿ

ಗಣೇಶನಿಗೆ  ಪ್ರಿಯವಾದ ಮೋದಕ ಮಾಡುವ ವಿಧಾನ ತಿಳಿಯಿರಿ
ಬೆಂಗಳೂರು , ಬುಧವಾರ, 31 ಆಗಸ್ಟ್ 2022 (08:00 IST)
ಗಣೇಶನಿಗೆ ಈ ತಿನಿಸು ತುಂಬಾ ಪ್ರಿಯವಾದುದು. ಪೂಜೆಗೆ ಈ ತಿನಿಸು ತಯಾರಿಸಿದರೆ ಗಣೇಶನ ಪ್ರೀತಿ ಪಾತ್ರರಾಗುವರು ಎಂಬ ಪ್ರತೀತಿ ಇದೆ.
 
ಗಣೇಶ ಮೋದಕ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯಾವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

* ಮೈದಾ ಹಿಟ್ಟು – 1 ಕಪ್
* ಚಿರೋಟಿ ರವೆ – 1/4 ಕಪ್
* ಉಪ್ಪು – ಚಿಟಿಕೆ
* ಬೆಲ್ಲ – 1 ಅಚ್ಚು
* ಕೊಬ್ಬರಿ ತುರಿ- 1 ಕಪ್
* ಏಲಕ್ಕಿ ಪುಡಿ
* ಗಸಗಸೆ – 1 ಚಮಚ
* ಎಳ್ಳು -ಸ್ವಲ್ಪ
* ಗೋಡಂಬಿ, ಬಾದಾಮಿ – 3-4 ಚಮಚ
* ಎಣ್ಣೆ – ಕರಿಯಲು

ಮಾಡುವ ವಿಧಾನ

* ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
* ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
* ಹೂರಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
* ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಹೂರಣ ಸೇರಿಸಿ ಮಧ್ಯಕ್ಕೆ ಮಡಚಿ
* ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಹೂರಣ ಆಚೆ ಬಾರದಂತೆ ನೋಡಿಕೊಳ್ಳಿ.
* ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)


Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬ ಮಾಡುವ ಮೊದಲು ಈ ರೋಚಕ ಸತ್ಯ ತಿಳಿಯಿರಿ