Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಕಿಡ್ನ್ಯಾಪ್ ಮಾಡಿದ ಆರೋಪಿ ಅಂದರ್

geetha
ಭಾನುವಾರ, 25 ಫೆಬ್ರವರಿ 2024 (11:47 IST)
ಬೆಂಗಳೂರು- ನಗರದಲ್ಲಿ ವಿದೇಶಿ ಪ್ರಜೆಯನ್ನ  ಕಿಡ್ನ್ಯಾಪ್ ಮಾಡಿದ ಆರೋಪಿಯನ್ನ ಪೊಲೀಸರು ಸಿನಿಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ.ಕಡೆಗೂ ವಿದೇಶಿ ಪ್ರಜೆಗೆ ಹೊಡೆದು ಬಡಿದಿದ್ದ ಖದೀಮರು ಅಂದರ್ ಆಗಿದ್ದಾನೆ.ಡ್ರಗ್ಸ್ ಕೊಡ್ತೀನಿ ಅಂತ ಹೇಳಿ ವಿದೇಶಿ ಪ್ರಜೆಯನ್ನ  ಕಿಡ್ನ್ಯಾಪ್ ಮಾಡಿದ್ದ.ಅಣ್ಣನನ್ನ ನೋಡಲು ವಿದೇಶಿ ಪ್ರಜೆ ಬೆಂಗಳೂರಿಗೆ ಬಂದಿದ್ದ.ಈ ನಡುವೆ ಡ್ರಗ್ಸ್ ಗೆ ವಿದೇಶಿ ಪ್ರಜೆ ಅಡಿಕ್ಟ್ ಆಗಿದ್ದ ಹೀಗಾಗಿ ಡಾರ್ಕ್ ವೆಬ್ ಮೂಲಕ ಮೋನಿಷ್ ಸಂಪರ್ಕ ಮಾಡಿದ್ದ.ಮೋನಿಷ್ ನಿಂದ ಐದು ಬಾರಿ ನಿರತರವಾಗಿ ಡ್ರಗ್ಸ್ ಖರೀದಿ ಮಾಡ್ತಾ ಇದ್ದ ಹೀಗಾಗಿ ಈತನ ಬಳಿ ಹೆಚ್ಚಿನ ಹಣ ಇರಬೇಕೆಂದು ಭಾವಿಸಿದ್ದ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ರೆ ಹೆಚ್ಚು ಹಣ ಸಿಗುತ್ತೆ ಎಂದು ಭಾವಿಸಿದ್ದರು.
 
ಮಾಸ್ಟರ್ ಮೈಂಡ್ ಮೋನಿಷ್ ಸಹಚರರ ಜೊತೆ ಸೇರಿ ಪ್ಲಾನ್ ಮಾಡಿದ್ದಾರೆ.ಪ್ಲಾನ್ ನಂತೆ ಬೊಮ್ಮನಹಳ್ಳಿ ಬಳಿಗೆ ಡ್ರಗ್ಸ್ ಕೊಡುವುದಾಗಿ ಹೇಳಿ ಕರೆಸಿದ್ದರು.ವಿದೇಶಿ ಪ್ರಜೆ ಬಂದ ಕೂಡಲೇ ಇತರ ಆರೋಪಿಗಳ ಜೊತೆ ಕಿಡ್ನಾಪ್ ಮಾಡಿದ್ರು.ರೂಮ್ ನಲ್ಲಿ ಕುಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ರು ಬಳಿಕ ಅಕೌಂಟ್ ನಿಂದ 78 ಸಾವಿರ ಮೊದಲು ಹಣ ಟ್ರಾನ್ಸ್ ಪರ್ ಮಾಡಿಸಿಕೊಂಡಿದ್ದಾರೆ.ನಂತ್ರ ವಿದೇಶಿ ಪ್ರಜೆಯ ಅಣ್ಣನಿಗೆ ಕರೆ ಮಾಡಿಸಿ 40 ಸಾವಿರ ಹಣ ವಸೂಲಿ ಮಾಡಿದ್ದಾರೆ.ಬಳಿಕ ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದ .ಡ್ರಗ್ಸ್ ತೆಗೆದುಕೊಳ್ಳುತ್ತೇನೆ ನನ್ನ ಮೇಲೆ ಕೇಸ್ ಆಗುತ್ತೆ ಅಂತ ಯಾರಿಗೂ ಹೇಳಿರಲಿಲ್ಲ.15 ದಿನ ಕಳೆದ ಮೇಲೆ ಸಂಬಂಧಿಯಾಗಿರೋ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ರು ಬಳಿಕ ಡಿಸಿಪಿ ಬಾಬಾಗೆ ತಿಳಿಸಿ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ ಐಆರ್ ಮಾಡ್ತಾರೆ.
 
ನಂತ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೂಡಲೇ ಆರೋಪಿಗಳ ಬಂಧನ ಮಾಡ್ತಾರೆ.ಮಾಸ್ಟರ್ ಮೈಂಡ್ ಮೋನಿಷ್ , ಲೋಕೇಶ್ , ಕಿಶೋರ್ ,ರವಿ,ದಿಲೀಪ್ , ಸತೀಶ್ ಸೇರಿ 6 ಮಂದಿ ಬಂಧಿಸಿ ವಿಚಾರಣೆ ಮಾಡಿದ್ದಾರೆ.ಮೋನಿಷ್ ಟ್ಯಾಟೋ ಹಾಕೋ ಕೆಲಸ ಮಾಡ್ತಿದ್ದ,ಇತರ ಆರೋಪಿಗಳು ಬಟ್ಟೆ ವ್ಯಾಪಾರ ,ತಳ್ಳೋ ಗಾಡಿಯಲ್ಲಿ ವ್ಯಾಪಾರ ಮಾಡ್ತಾರೆ.ಆಗ ರೂಂನಲ್ಲಿ ಕುಡಿ ಹಾಕಿ ಹಲ್ಲೆ ನಡೆಸಿರೋ ವಿಷಯ ತಿಳಿದು ಬರುತ್ತೆ.ಸದ್ಯ ಆರೋಪಿಗಳನ್ನು ಬಂಧಿಸಿ ಬೊಮ್ಮನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments