Publish Date: Mon, 03 Feb 2020 (11:14 IST)
Updated Date: Mon, 03 Feb 2020 (11:15 IST)
ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಸಂಸದ ಅನಂತ ಕುಮಾರ್ ಹೆಗ್ಡೆ ಈಗ ಮತ್ತೆ ಮಹಾತ್ಮಾ ಗಾಂಧೀಜಿ ಬಗ್ಗೆ ಹೇಳಿಕೆ ಮಾಡಿ ವಿವಾಕ್ಕೀಡಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವೆಲ್ಲಾ ಒಂದು ನಾಟಕ ಎನ್ನುವ ಮೂಲಕ ಸಂಸದ ಹೆಗ್ಡೆ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
‘ಗಾಂಧೀಜಿಯವರ ಸ್ವಾತಂತ್ರ್ಯಹೋರಾಟವೇ ದೊಡ್ಡ ನಾಟಕವಾಗಿತ್ತು. ಅವರಂತಹ ವ್ಯಕ್ತಿಗಳನ್ನು ಈ ದೇಶ ಮಹಾತ್ಮಾ ಎಂದು ಕರೆಯುವಾಗ ನನ್ನ ರಕ್ತ ಕುದಿಯುತ್ತದೆ’ ಎಂದು ಅನಂತ ಕುಮಾರ್ ಹೆಗ್ಡೆ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ.