Select Your Language

Notifications

webdunia
webdunia
webdunia
webdunia

ಅನಂತ್ ಕುಮಾರ್ ಹೆಗಡೆ ಮೈಂಡ್ ಯುವರ್ ಟಂಗ್

Anant Kumar Hegde

geetha

bangalore , ಭಾನುವಾರ, 14 ಜನವರಿ 2024 (21:00 IST)
ಬೆಂಗಳೂರು-ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಸ್ವತ್ತಾ?ಹಿಂದೂ ಧರ್ಮನ ನಿಮ್ಮ ಅಪ್ಪನ ಮನೆ ಆಸ್ತಿ ತರಹ ಆಡ್ತಿದ್ದೀರಲ್ಲ?ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಕೊಳ್ಳಿ ಹೆಗಡೆಯವರೇ,ಬಿಜೆಪಿಯಲ್ಲಿ ಟಿಕೇಟ್ ಸಿಗಲ್ಲ ಎನ್ನೋದು ಗೊತ್ತಾಗಿದೆ.ಇವರ ಬಾಯಿ ಚಪಲದಿಂದ ಹಿಂದೆ ಮಂತ್ರಿ ಗಿರಿ ಕಳೆದುಕೊಂಡರು.ಬಾಯಿಗೆ ಬಂದಂತೆ ಮಾತಾಡುತ್ತಿದ್ದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ?ಮನ್ ಕಿ ಬಾತ್ ಜೊತೆಗೆ ಕಾಮ್ ಕಿ ಬಾತ್ ಮಾತಾಡೋಣ ಬನ್ನಿ ಎಂದು ಪ್ರದೀಪ್ ಈಶ್ವರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ನಾವೂ ಹಿಂದೂ ಧರ್ಮದವರೇ, ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ.ನೀವು ಒಂದು ಮಾತಾಡಿದರೆ ನಾವು ನಾಲ್ಕು ಮಾತಾಡ್ತೇವೆ.ಬನ್ನಿ ಈ ಫೈಟ್ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡೋಣ.ನಮ್ಮ ಎದೆ ಬಗೆದರೆ ಶ್ರೀರಾಮನೂ ಕಾಣ್ತಾನೆ, ಸಿದ್ದರಾಮಯ್ಯ ನೂ ಕಾಣ್ತಾರೆ, ಅಂಬೇಡ್ಕರ್ರೂ ಕಾಣ್ತಾರೆ, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ.ಪ್ರಚೋದನೆಯಿಂದ ಏನಾದ್ರೂ ಹೆಚ್ಚೂ ಕಡಿಮೆ ಆದ್ರೆ ಹೆಗಡೆ ಬರ್ತಾರಾ?ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಅನಂತ್ ಕುಮಾರ್ ಹೆಗಡೆ ವಿರುದ್ದ ಎಫ್ಐಆರ್ ಆಗಬೇಕು ಅವರನ್ನು ಒಳಗೆ ಹಾಕಬೇಕು ಎಂದು ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯಲ್ಲಿ ರಸ್ತೆಗಿಳಿಯಲಿವೆ ಪಿಂಕ್‌ ಆಟೋ!