Select Your Language

Notifications

webdunia
webdunia
webdunia
webdunia

Amit Shah: ಕನ್ನಡಿಗರ ಜೊತೆ ಕನ್ನಡದಲ್ಲೇ ವ್ಯವಹಾರ: ಮಾತು ಕೊಟ್ಟ ಅಮಿತ್ ಶಾ

Amit Shah

Krishnaveni K

ನವದೆಹಲಿ , ಶನಿವಾರ, 22 ಮಾರ್ಚ್ 2025 (10:38 IST)
ನವದೆಹಲಿ: ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಯಾರ ಮೇಲೂ ಹಿಂದಿ ಹೇರಿಕೆ ಮಾಡಲ್ಲ, ಕನ್ನಡಿಗರ ಜೊತೆ ಕನ್ನಡದಲ್ಲೇ ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ.

ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಈಗಾಗಲೇ ಎನ್ ಇಪಿ ಶಿಕ್ಷಣ ನೀತಿಯಡಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಸಿಡಿದೆದ್ದಿದೆ. ತಮಿಳುನಾಡು ಈಗಾಗಲೇ ಯಾವುದೇ ಕಾರಣಕ್ಕೆ ಎನ್ ಇಪಿ ಜಾರಿಗೆ ತರಲ್ಲ ಎಂದಿದೆ.

ಈ ಗೊಂದಲಗಳಿಗೆ ಗೃಹಸಚಿವ ಅಮಿತ್ ಶಾ ತೆರೆ ಎಳೆದಿದ್ದಾರೆ. ಭಾಷೆಯ ಹೆಸರಿನಲ್ಲಿ ದೇಶ ವಿಭಜಿಸುವ ಕೆಲಸ ಆಗಬಾರದು. ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ರಾ್ಯಗಳ ಜೊತೆ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಪತ್ರ ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ.

ಕರ್ನಾಟಕದ ಜೊತೆ ಕನ್ನಡದಲ್ಲಿ, ತಮಿಳುನಾಡು ಜೊತೆ ತಮಿಳಿನಲ್ಲಿ ಸೇರಿದಂತೆ ಆಯಾ ರಾಜ್ಯಗಳ ಜೊತೆ ಆಯಾ ಭಾಷೆಯಲ್ಲೇ ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ. ಕೆಲವರು ಭಾಷಾ ವಿವಾದ ಮಾಡಿ ತಮ್ಮ ಭ್ರಷ್ಟಾಚಾರ ಮರೆ ಮಾಚಲು ನೋಡುತ್ತಿದ್ದಾರೆ. ಅಂತಹವರಿಗೆ ಇದು ಬಲವಾದ ಪ್ರತ್ಯುತ್ತರಾಗಿದೆ ಎನ್ನುವ ಮೂಲಕ ತಮಿಳುನಾಡಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕರ ಅಮಾನತಿನ ಬೆನ್ನಲ್ಲೇ ಬೆಂಗಳೂರಿಗೆ ಬಂದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ