ಖಾಸಗಿ ಕಾರ್ಯಕ್ರಮದಲ್ಲಿ ದೆಹಲಿಗೆ ತೆರಳಬೇಕಾಗಿದ್ದ ಅಮಿತ್ ಶಾ ಮತ್ತೆ ಖಾಸಗಿ ಹೋಟೆಲ್ ಗೆ ಹಿಂತುರುಗಿ ಸಿಂ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದು ಭಾರಿ ಕುತುಹಲ ಮೂಡಿಸಿತ್ತು. ಅಮಿತ್ ಶಾ ಜೊತೆ ರಾಜ್ಯ ಚುನಾವಣೆ ಉಸ್ತುವಾರಿ ಧರ್ಮೆಂದ್ರ ಪ್ರಧಾನ್ ಮತ್ತೆ ದೆಹಲಿ ಪ್ರಯಾಣ ಮೊಟುಕುಗೊಳಿಸಿ ಸಿಎಂ ಬೊಮ್ಮಾಯಿ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ನಾಲ್ಕು ಹಂತದಲ್ಲಿ ಪ್ರವಾಸ ಮಾಡಲಿರೋ ಸಿಎಂ ಬಳಿ ಪ್ರವಾಸ ವಿವರ ಪಡೆದು,ರ್ಯಾಲಿಗಿಂತ ಹೆಚ್ಚು ರೋಡ್ ಶೋ ನಡೆಸುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರಂತೆ.
ರ್ಯಾಲಿಯುದ್ದಕ್ಕೂ ಸರ್ಕಾರದ ಯೋಜನೆ ಪ್ರಚಾರ ಸೇರಿದಂತೆ ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಜನರಿಗೆ ತಲುಪಿಸುವುದು. ವಿಶೇಷವಾಗಿ ಕಾಂಗ್ರೆಸ್ ನಾಯಕರ ಕಾಂಗ್ರೆಸ್ ಲಿಂಗಾಯತ ಅಸ್ತ್ರಕ್ಕೆ,ಲಿಂಗಾಯತ ನಾಯಕರ ಮೂಲಕವೇ ಉತ್ತರ ನೀಡಿ ಕಾಂಗ್ರೆಸ್ ಅಪಪ್ರಚಾರಕ್ಕೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂಬ ತಂತ್ರ ಉಪಯೋಗಿಸಿ ಅಂತಾ ಅಮಿತ್ ಶಾ ಸೂಚನೆ ನೀಡಿದ್ದಾರೆ.ಉಳಿದ ಸಂಘಟನಾತ್ಮಕ ವಿಚಾರ ನಾವು ನೋಡಿಕೊಳ್ಳುತ್ತೇವೆ. ಪಕ್ಷದ ವಿಚಾರ,ನಿಲುವು,ಗುರಿಯನ್ನು ಸಮರ್ಥವಾಗಿ ಜನರಿಗೆ ತಲುಪಿಸಿ ಬೆಂಗಳೂರಿಗಿಂತ ಹೆಚ್ಚು ಸಮಯ ಜಿಲ್ಲೆಗಳಲಿದ್ದು ಪ್ರಚಾರ ನಡೆಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ಅಮಿತ್ ಶಾ ಸಲಹೆ ಸೂಚನೆಗಳನ್ನ ನೀಡಿದ್ದಾರೆಂದು ಹೇಳಲಾಗ್ತಿದೆ.
ಅಮಿತ್ ಶಾ ರಾಜ್ಯ ನಾಯಕರ ಜೊತೆ ಸರಣಿ ಸಭೆಗಳನ್ನ ನಡೆಸಿ ದೆಹಲಿಗೆ ಹಿಂತುರುಗಿದ್ದಾರೆ. ಘಟಾನುಘಟಿ ನಾಯಕರನ್ನ ಕರೆಸಿ ಹೈ ವೋಲ್ಟೇಜ್ ಸಭೆ ನಡೆಸಿ, ಲಿಂಗಾಯತ ಸಮುದಾಯದ ಮತಗಳು ಕೈ ಬಿಡದಂತೆ ನೋಡಿಕೊಳ್ಳುವುದು ಪಕ್ಷ ಬಿಟ್ಟವರನ್ನ ಕಟ್ಟಿ ಹಾಕೋದಕ್ಕೆ ರಣತಂತ್ರ ಹೆಣೆಯುವುದರ ಜೊತೆಗೆ ಕಾಂಗ್ರೆಸ್ ಘಟಾನುಗಟಿ ನಾಯಕರನ್ನ ಸೋಲಿಸೋದಕ್ಕೆ ಕೊಟ್ಟಿರುವ ಸಲಹೆಗಳು ರಣತಂತ್ರಗಳು ಈ ಬಾರಿಯ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ