ತುಮಕೂರು: ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದ ಕಾರಣ ತಮ್ಮ ತಂದೆಯ ಶವವನ್ನು ಸಹೋದರರು ಬೈಕ್‌ನಲ್ಲೇ ಸಾಗಿಸಿದ ಹೃದಯ ವಿದ್ರಾಹಕ ಘಟನೆ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
 
									
			
			 
 			
 
 			
					
			        							
								
																	ವೈ.ಎನ್.ಹೊಸಕೋಟೆ ಹೋಬಳಿ ದಳವಾಯಿ ಗ್ರಾಮದ ಗುಡುಕಲ್ಲು ಹೊನ್ನೂರಪ್ಪ (80) ಅವರು ಬುಧವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರಾಗಿ, ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.
									
										
								
																	ಇನ್ನೂ ಆಂಬುಲೆನ್ಸ್‌ಗಾಗಿ ಆಸ್ಪತ್ರೆಯಲ್ಲಿ ವಿಚಾರಿಸಿದ್ದಾರೆ. ಆದರೆ ವಾಹನ ಇಲ್ಲದಿರುವುದು ಗಮನಕ್ಕೆ ಬಂದು ತಕ್ಷಣವೇ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಚಾಲಕರು 'ನಮಗೆ ಶವ ಸಾಗಿಸಲು ಅವಕಾಶ ಇಲ್ಲ' ಎಂದು ಹೇಳಿದ್ದಾರೆ. ಇದರಿಂದ ಸಹೋದರರು ಆಸ್ಪತ್ರೆಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ಬೈಕ್‌ನಲ್ಲೇ ಮೃತದೇಹ ಸಾಗಿಸಿದ್ದಾರೆ.
									
											
							                     
							
							
			        							
								
																	ಇದನ್ನು ನೋಡಿದ ಗ್ರಾಮಸ್ಥರು ಆರೋಗ್ಯ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.